ಬೆಳಗಾವಿ: ಇಲ್ಲಿ ಶುಕ್ರವಾರ ರಾತ್ರಿ ಮೆಹಬೂಬ್ ಸುಬಾನಿ ಉರುಸ್ ವೇಳೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಶನಿವಾರ 11 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಪ್ರತಿ ವರ್ಷ ಉರುಸ್ ಶನಿವಾರ ಕೂಟ, ಜಾಲ್ಗಾರ ಗಲ್ಲಿ ಮೂಲಕ ಸಾಗಿ ದರ್ಗಾಕ್ಕೆ ಹೋಗುತ್ತಿತ್ತು. ಈ ವರ್ಷ ಅನುಮತಿ ಇಲ್ಲದೇ ಖಡಕ್ ಗಲ್ಲಿಗೆ ಮೆರವಣಿಗೆ ಬಂದಿದ್ದು, ಗಲಾಟೆಗೆ ಕಾರಣವಾಗಿದೆ.
ಮೆರವಣಿಗೆ ವೇಳೆ ಮುಸ್ಲಿಂ ಯುವಕರು ‘ಐ ಲವ್ ಮುಹಮ್ಮದ್’ ಎಂಬ ಘೋಷಣೆ ಕೂಗಿದರು. ಮೆರವಣಿಗೆ eKE ಖಡಕ್ ಗಲ್ಲಿಗೆ ಬಂದಿದೆ ಎಂದು ಅಲ್ಲಿನ ಹಿಂದೂ ಯುವಕರು ಪ್ರಶ್ನೆ ಮಾಡಿದರು. ಆಗ ಕತ್ತಲಿನಿಂದ ಕಲ್ಲುಗಳು ತೂರಿಬಂದವು ಎಂದು ಮೆರವಣಿಗೆಯಲ್ಲಿದ್ದವರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ತಿಳಿಗೊಳಿಸಿರು.
ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ, ಇಬ್ಬರು ಡಿಸಿಪಿ ಹಾಗೂ ಪೊಲೀಸರ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದರು. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಾತಾವರಣ ತಿಳಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.