ADVERTISEMENT

ಬೆಳಗಾವಿ: ಮಹಿಳಾ ಅಧಿಕಾರಿ ವಿಡಿಯೊ ಸೆರೆ; ನೌಕರನ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
<div class="paragraphs"><p>ಬಂಧನ</p></div>

ಬಂಧನ

   

ಬೆಳಗಾವಿ: ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿ, ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ₹ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮಹಿಲಾ ಅಧಿಕಾರಿಯ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ನೌಕರ ವಿನೋದ ಬಂಧಿತ. ಈ ಪ್ರಕರಣದಲ್ಲಿ ಈಗಾಗಲೇ ಮೂವರು ಯೂ ಟ್ಯೂಬರ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ವಿನೋದ ಹಾಗೂ ಮಹಿಳಾ ಅಧಿಕಾರಿ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿ ಮಾತ್ಸರ್ಯದಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಲು ವಿನೋದ ಹೊಂಚು ಹಾಕಿದ್ದ. ಇದಕ್ಕೆ ಯೂ ಟ್ಯೂಬರ್ಸ್‌ ನೆರವು ಪಡೆದಿದ್ದ. ಮಹಿಳಾ ಅಧಿಕಾರಿ ಹಾಗೂ ಅವರೊಂದಿಗೆ ಆಪ್ತಕ್ಷಣಗಳನ್ನು ಕಳೆದ ಇನ್ನೊಬ್ಬ ಅಧಿಕಾರಿ ಕಡೆಯಿಂದ ತಲಾ ₹50 ಲಕ್ಷ ಪಡೆಯುವ ಹುನ್ನಾರ ನಡೆಸಿದ್ದ’ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.