
ಕಬ್ಬು ದರ ಪರಿಷ್ಕರಣೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ರೈತರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರ ಡ್ರೋನ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ (ಸಂಗ್ರಹ ಚಿತ್ರ)
ಬೆಳಗಾವಿ: ಸಕ್ಕರೆ ಜಿಲ್ಲೆ ಬೆಳಗಾವಿಗೆ 2025ನೇ ವರ್ಷ ಸಿಹಿ– ಕಹಿಗಳ ಮಿಶ್ರಣವನ್ನು ಉಣಬಡಿಸಿತು. ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಇದೇ ಜ.21ರಂದು ನಡೆಯಿತು. ಈ ಮೂಲಕ ಜಿಲ್ಲೆಗೆ ರಾಷ್ಟ್ರದ ಇತಿಹಾಸದ ಪುಟದಲ್ಲಿ ಆದ್ಯತೆ ಸಿಕ್ಕಂತಾಯಿತು.
ಕಿತ್ತೂರು ಉತ್ಸವ, ಬೆಳವಡಿ ಉತ್ಸವ, ಅಖಲ ಭಾರತ ಜೈನ ಸಮಾವೇಶ, ಅಂಬೇಡ್ಕರ್–100 ನೆನಪಿನ ಕಾರ್ಯಕ್ರಮಗಳು ವೈಭವ ಮರುಕಳಿಸುವಂತೆ ಮಾಡಿದವು. ಕುಂಭಮೇಳದಲ್ಲಿ 13 ಮಂದಿ ಸಾವು, ಸರಣಿ ಅಪಘಾತ, ಕೃಷ್ಣಮೃಗಗಳ ಸಾವು ಮುಂತಾದ ಘಟನಾವಳಿಗಳು ಕಹಿ ನೆನಪಾಗಿ ಉಳಿದವು.
ಜಿಲ್ಲೆಯಲ್ಲಿ ಸಂಭವಿಸಿದ ಆಯ್ದ ಘಟನಾವಳಿಗಳ (ಜನವರಿಯಿಂದ ಜೂನ್‌ವರೆಗೆ) ನೆನಪುಗಳು ಇಲ್ಲಿವೆ.
4.ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಳಗಾವಿಗೆ ಭೇಟಿ. ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
7.ಬಾಣಂತಿ, ಹಸುಗೂಸನ್ನು ಹೊರಹಾಕಿದ ಖಾಸಗಿ ಫೈನಾನ್ಸ್. ಸುದ್ದಿ ಪ್ರಜಾವಾಣಿ ಮುಖಪುಟದಲ್ಲಿ ಪ್ರಕಟವಾಯಿತು. ಇದರೊಂದಿಗೆ ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್‌ಗಳ ಉಪಟಳಕ್ಕೆ ಸಿಕ್ಕಿಕೊಂಡ ಮಹಿಳೆಯರಿಂದ ದೊಡ್ಡ ಆಂದೋಲನ ನಡೆಯಿತು.
14. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತವಾಗಿ, ಬೆನ್ನು ಮೂಳೆ ಮುರಿದುಕೊಂಡಿದ್ದರು. ತಿಂಗಳು ಗಟ್ಟಲೇ ಚಿಕಿತ್ಸೆ ಬಳಿಕ ಚೇತರಿಸಿಕೊಂಡರು.
21. ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದ ಕಾರಣ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದಿಂದ ‘ಗಾಂಧಿ ಭಾರತ’ ಸಮಾವೇಶ ನಡೆಯಿತು.
29. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ತರಳಿದ್ದ ಬೆಳಗಾವಿಯ ನಾಲ್ವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಬಳಿಕ ಮೂವರು ಸೇರಿ ಒಟ್ಟು ಏಳು ಮಂದಿ ಭಕ್ತರು ಕೊನೆಯುಸಿರೆಳೆದರು.
24. ಮಹಾಕುಂಭ ಮೇಳಕ್ಕೆ ಪ್ರಯಾಗ್‌ರಾಜ್ ತೆರಳಿದ್ದ ಜೀಪ್ ಅಪಘಾತಕ್ಕೀಡಾಗಿ ಜಿಲ್ಲೆಯ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು. ಇದರೊಂದಿಗೆ ಒಟ್ಟು 13 ಮಂದಿ ಮಹಾಕುಂಭ ಮೇಳದ ನೆಪದಲ್ಲಿ ಪ್ರಾಣ ಕಳೆದುಕೊಂಡರು.
28. ಬೆಳವಡಿ ಮಲ್ಲಮ್ಮನ ಉತ್ಸವದಿಂದ ಜಿಲ್ಲೆಯಲ್ಲಿ ಕಳೆಗಟ್ಟಿದ ಸಂಭ್ರಮ.
5. ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
15. ಮೇಯರ್ ಆಗಿ ಮಂಗೇಶ ಪವಾರ್, ಉಪಮೇಯರ್ ಆಗಿ ವಾಣಿ ಜೋಶಿ ಆಯ್ಕೆ
15. ಡಾ.ಬಿ.ಆರ್. ಅಂಬೇಡ್ಕರ್–100 ಸ್ಮರಣೀಯ ಕಾರ್ಯಕ್ರಮ. ಅಂಬೇಡ್ಕರ್ ಅವರು ಚಿಕ್ಕೋಡಿಯ ನ್ಯಾಯಾಲಯಕ್ಕೆ ಬಂದು ಪ್ರಕರಣವೊಂದರಲ್ಲಿ ವಾದ ಮಾಡಿದ ದಿನಕ್ಕೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಿತು.
16. ಬೆಳಗಾವಿಯ ಗಾಂಧಿ ನಗರದಲ್ಲಿ ಪೈಪ್‌ಲೈನ್ ಕಾಮಗಾರಿ ಮಾಡುವ ವೇಳೆ ದಿಢೀರ್ ಎಂದು ಮಣ್ಣು ಕುಸಿದು ಇಬ್ಬರು ಯುವಕರು ಅವಶೇಷಗಳಲ್ಲಿ ಸಿಕ್ಕು ಸಾವನ್ನಪ್ಪಿದರು.
28. ಬೆಳಗಾವಿಯಲ್ಲಿ ಕೆಪಿಸಿಸಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ನುಗ್ಗಿದ ಬಿಜೆಪಿ ಕಾರ್ಯಕರ್ತೆಯರು ಸಿ.ಎಂ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ರೊಚ್ಚಿಗೆದ್ದ ಸಿದ್ದರಾಮಯ್ಯ ಭದ್ರತೆಗೆ ನಿಯೋಜನೆಗೊಂಡಿದ್ದ ಧಾರವಾಡ ಎಎಸ್ಪಿ ನಾರಾಯಣ ಭರಮಣಿ ಅವರ ಮೇಲೆ ಕೈ ಮಾಡಿದರು. ಈ ಸುದ್ದಿ ಸಾಕಷ್ಟು ಹಗ್ಗ– ಜಗ್ಗಾಟಕ್ಕೆ ನಾಂದಿ ಹಾಡಿತು.
2.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ರೂಪಾ ಪಾಟೀಲ ಇಡೀ ರಾಜ್ಯದ ಗಮನ ಸೆಳೆದರು. ಜಿಲ್ಲೆಯ ಫಲಿತಾಂಶ ಕಳಪೆಯಾಗಿದ್ದರೂ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾದರು.
8. ಬೆಳಗಾವಿಗೆ ಸೊಸೆ ತಂದ ಸೌಭಾಗ್ಯ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿ, ಅದರ ವಿವರಗಳನ್ನು ವಿಶ್ವದ ಮುಂದೆ ತೆರೆದಿಟ್ಟ ಸೋಫಿಯಾ ಖುರೇಷಿ ಅವರು ಹುಕ್ಕೇರಿ ಪಟ್ಟಣದ ಸೊಸೆ. ಅವರ ಮೂಲಕ ಇಡೀ ದೇಶವು ಹುಕ್ಕೇರಿಯತ್ತ ತಿರುಗಿ ನೋಡುವಂತೆ ಆಯಿತು.
26. ಧಾರಾಕಾರ ಮಳೆಯಿಂದ ಮಹಾರಾಷ್ಟ್ರದಿಂದ ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರವಿನಲ್ಲಿ ಏರಿಕೆ ಕಂಡು, ಜಿಲ್ಲೆಯ 34 ಸೇತುವೆಗಳು ಮುಳುಗಡೆಯಾದವು. ಒಂದು ವಾರ ಸೇತುವೆಗಳ ಸಂಚಾರ ಬಂದ್ ಆಯಿತು.
27. ಅಥಣಿ ತಾಲ್ಲೂಕಿನ ಸಂಬರಗಿಯಲ್ಲಿ ಉಕ್ಕಿ ಹರಿಯುವ ಹಳ್ಳಕ್ಕೆ ಸಿಕ್ಕು ಇಬ್ಬರು ಬಾಲಕರು ಮೃತಪಟ್ಟರು.
8. ಅಖಿಲ ಭಾರತ ಜೈನ ಸಮಾವೇಶ ಚಿಕ್ಕೋಡಿಯಲ್ಲಿ ನಡೆಯಿತು. ಜೈನರ ಬೇಡಿಕೆ ಈಡೇರದಿದ್ದರೆ ಸಾಮೂಹಿಕ ಸಲ್ಲೇಖನ ವ್ರತ ಕೈಗೊಳ್ಳುವುದಾಗಿ ಮುನಿಗಳು ಎಚ್ಚರಿಕೆ ನೀಡಿದರು. ಈ ಸಮಾವೇಶ ಜೈನ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸಲು ನಾಂದಿ ಹಾಡಿತು.
ಜೂನ್ 30ರಿಂದ ಜುಲೈ 8ರವರೆಗೆ: ಗೋಕಾಕದಲ್ಲಿ ಸಂಭ್ರಮದಿಂದ ಗ್ರಾಮದೇವಿ ಜಾತ್ರೆ ನಡೆಯಿತು.
4. ವಿಟಿಯು 25ನೇ ವಾರ್ಷಿಕ ಘಟಿಕೋತ್ಸವ (ಭಾಗ–1): ಇಸ್ರೊ ಅಧ್ಯಕ್ಷ ಡಾ.ವಿ.ನಾರಾಯಣನ್, ಎಕ್ಸೆಲ್ ಇಂಡಿಯಾ ಸಂಸ್ಥಾಪಕ ಪ್ರಶಾಂತ್ ಪ್ರಕಾಶ್ ಮತ್ತು ಬೆಂಗಳೂರಿನ ಎಟ್ರಿಯ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎಸ್.ಸುಂದರ್ ರಾಜು ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು, ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಿದರು.
8. ಗೋಕಾಕದ ಸರ್ಕಾರಿ ಔಷಧ ಉಗ್ರಾಣದಲ್ಲಿ ₹97 ಲಕ್ಷ ಮೌಲ್ಯದ ಅವಧಿ ಮುಗಿದ ಔಷಧಿಗಳು ಪತ್ತೆ.
8. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ಸವದತ್ತಿ ಸಮೀಪದ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ದೇವಸ್ಥಾನದ ಪ್ರಾಂಗಣಕ್ಕೆ ನೀರು ನುಗ್ಗಿ ಕೆಲವು ದಾಖಲೆಗಳು ನಾಶ.
29. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 15 ಸ್ಥಾನಗಳನ್ನೂ ರಮೇಶ ಕತ್ತಿ, ಎ.ಬಿ.ಪಾಟೀಲ ಹಾಗೂ ಶಾಸಕ ನಿಖಿಲ್ ಕತ್ತಿ ನೇತೃತ್ವದ ಸ್ವಾಭಿಮಾನಿ ಪೆನಲ್ ಗೆದ್ದುಕೊಂಡಿತು. ಒಂದು ತಿಂಗಳಿಂದ ಹುಕ್ಕೇರಿಯಲ್ಲೇ ಬೀಡುಬಿಟ್ಟಿದ್ದ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನಕ್ಕೆ ಹಿನ್ನಡೆ ಉಂಟಾಯಿತು.
29. ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ 15 ನಿರ್ದೇಶಕ ಸ್ಥಾನಗಳಿಗೆ ಸಚಿವೆ ಹೆಬ್ಬಾಳಕರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದ ‘ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಃಶ್ಚೇತನ ರೈತರ ಪೆನಲ್’ ಭರ್ಜರಿ ಗೆಲುವು ಸಾಧಿಸಿತು.
19. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಏಳು ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯಿತು.
23ರಿಂದ 25ರವರೆಗೆ: ಮಳೆ ಮಧ್ಯೆಯೂ ಸಡಗರದಿಂದ ಜರುಗಿದ ಕಿತ್ತೂರು ಉತ್ಸವ.
31 .ಮರಾಠಾ ಮಂಡಳ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ (ಹಲಗೇಕರ), ಸಣ್ಣನಿಂಗಪ್ಪ ಮುಶೆನ್ನಗೋಳ ಹಾಗೂ ಪುಂಡಲೀಕ ಶಾಸ್ತ್ರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ. ಕನ್ನಡ ವಿರೋಧಿ ಧೋರಣೆ ಹೊಂದಿರುವ ರಾಜಶ್ರೀ ನಾಗರಾಜ ಯಾದವ (ಹಲಗೇಕರ) ಅವರಿಗೆ ಪ್ರಶಸ್ತಿ ನೀಡಿದ್ದಕ್ಕೆ ಕನ್ನಡ ಸಂಘಟನೆಗಳ ಆಕ್ರೋಶ.
1. ಸಂಭ್ರಮದಿಂದ ನಡೆದ ಕರ್ನಾಟಕ ರಾಜ್ಯೋತ್ಸವ. 5 ಲಕ್ಷಕ್ಕೂ ಹೆಚ್ಚು ಜನರಿಂದ ಮೊಳಗಿದ ಕನ್ನಡ ಡಿಂಡಿಮ.
11. 30 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಜಾರಕಿಹೊಳಿ ಸಹೋದರರು ಇದೇ ಮೊದಲ ಬಾರಿ ಸಹಕಾರ ಕ್ಷೇತ್ರಕ್ಕೆ ನುಗ್ಗಿದರು. ಬಿಡಿಸಿಸಿ ಬ್ಯಾಂಕಿನ 13 ಸ್ಥಾನಗಳಲ್ಲಿ ಗೆದ್ದರು.
30.ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆಯೋಜಿಸಿದ್ದ ಮೈಸೂರು ದಸರಾ ಮಾದರಿ ವಸ್ತು ಪ್ರದರ್ಶನಕ್ಕೆ ಚಾಲನೆ.
4.ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಜಾತ್ರೆ ನಡೆಯಿತು.
8ರಿಂದ 19ರವರೆಗೆ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಿತು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 118 ಪ್ರತಿಭಟನೆ ನಡೆದವು. ನರೇಗಾ ಯೋಜನೆಯಿಂದ ಗಾಂಧಿ ಹೆಸರು ಕೈಬಿಡಲು ಮುಂದಾದ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು, ಸೌಧದ ಆವರಣದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ಟನ್ ಕಬ್ಬಿಗೆ ₹3500 ದರ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ರೈತರು 10 ದಿನಗಳ ಕಾಲ (ಅಕ್ಟೋಬರ್ 30ರಿಂದ ನ.8ರವರೆಗೆ) ಬೃಹತ್ ಹೋರಾಟ ಮಾಡಿದರು. ಪ್ರತಿ ದಿನ 10 ಸಾವಿರಕ್ಕೂ ಹೆಚ್ಚು ರೈತರು ರಾಜ್ಯ ಹೆದ್ದಾರಿ ಬಂದ್ ಮಾಡಿ ಹಗಲಿರುಳು ಧರಣಿ ಮಾಡಿದರು. ರೈತರ ಪಟ್ಟಿಗೆ ಮಣಿದ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಕೊನೆಗೆ ₹3300 ದರ ನೀಡಲು ಒಪ್ಪಿಗೆ ಸೂಚಿಸಿದವು. ರಾಜ್ಯದಲ್ಲಿ ದಶಕಗಳ ಬಳಿಕ ಇಷ್ಟು ದೊಡ್ಡ ಪ್ರಮಾಣದ ಆಂದೋಲನ ಮಾಡಿದ್ದು ಇತಿಹಾಸದ ಪುಟ ಸೇರಿತು.
ಬೆಳಗಾವಿ ಸಮೀಪದ ಭೂತರಾಮನ ಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಒಟ್ಟು 31 ಕೃಷ್ಣಮೃಗಗಳು ಗಳಲೆ ರೋಗ (ಇಂಡೀಡ್ ಹೆಮರೈಸಿಕ್ ಸೆಪ್ಟೀಸಿಮಿಯಾ– ಎಚ್.ಎಸ್) ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿದವು. ನ.13ರಂದು 8 ಕೃಷ್ಣಮೃಗ ಸತ್ತವು. ಅಲ್ಲಿಂದ ಆರಂಭವಾದ ಸಾವಿನ ಸರಣಿ ನ.18ಕ್ಕೆ 31ಕ್ಕೆ ತಲುಪಿತು. ಬಳಿಕ ಉಳಿದ ಏಳು ಕೃಷ್ಣಮೃಗಗಳಿಗೆ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಯಿತು. ದೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೃಷ್ಣಮೃಗಗಳು ಸಾವನ್ನಪ್ಪಿದ್ದು ಇದು ಎರಡನೇ ಘಟನೆಯಾಗಿ ದಾಖಲಾಯಿತು.
ಮಹಾರಾಷ್ಟ್ರದ ಸಿಂಧು ದುರಗಜಿಲ್ಲೆಯ ಸೀರೋಡಾ ವೇಳಾಗರ ಸಮುದ್ರ ತೀರಕ್ಕೆ ಅಕ್ಟೋಬರ್ 4ರಂದು ಪ್ರವಾಸಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದ ಏಳು ಮಂದಿ ಜಲ ಸಮಾಧಿಯಾದರು. ಮೊದಲ ದಿನ ನಾಲ್ವರ ಶವಗಳು ಸಿಕ್ಕರೆ; ಮಾರನೆ ದಿನ ಮತ್ತೆ ಮೂವರ ದೇಹಗಳು ಪತ್ತೆಯಾದವು. ಸಂಬಂಧಿಯೊಬ್ಬರ ಮದುವೆ ಕಾರ್ಯಕ್ಕೆ ಕೊಲ್ಹಾಪುರಕ್ಕೆ ಹೋಗಿದ್ದ ಕುಟುಂಬದವರು ಸಮುದ್ರ ತೀರದಲ್ಲಿ ಜಲಕ್ರೀಡೆ ಆಡುತ್ತಿದ್ದರು. ತೆರೆಗಳ ಸೆಳವಿಗೆ ಸಿಕ್ಕು ಸಮುದ್ರದ ಒಳಕ್ಕೆ ಹೋಗಿ ಮೃತಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.