ADVERTISEMENT

ಬೆಳಗಾವಿ | ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:40 IST
Last Updated 13 ಮೇ 2025, 14:40 IST
<div class="paragraphs"><p>ಬಂಧನ </p></div>

ಬಂಧನ

   

ಬೆಳಗಾವಿ: ಬಾಲಕಿಯನ್ನು ಪುಸಲಾಯಿಸಿ, ನಗರ ಹೊರವಲಯದ ಪ್ರದೇಶಕ್ಕೆ ಕರೆದೊಯ್ದ ಮೂವರು ಬಾಲಕರು, ಪಾರ್ಟಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆ ಮೇ 6ರಂದು ನಡೆದಿದ್ದು, ಸೋಮವಾರ ಬಾಲಕಿಯ ಪಾಲಕರು ಠಾಣೆಗೆ ದೂರು ನೀಡಿದ್ದಾರೆ.

ಕಾನೂನು ಸಂಘರ್ಷಕ್ಕೆ ಒಳಪಟ್ಟ ಈ ಮೂವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, ಬಾಲಕರ ಬಾಲಮಂದಿರಕ್ಕೆ ಸೇರಿಸಿದ್ದಾರೆ. ಇನ್ನೊಬ್ಬನಿಗಾಗಿ ಹುಡುಕಾಟ ನಡೆದಿದೆ.

ADVERTISEMENT

‘ವಿದ್ಯಾರ್ಥಿನಿ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಗರು ಕೆಲಸ ಮಾಡಿಕೊಂಡಿದ್ದರು. ಪರಿಚಯ ಮಾಡಿ, ಪ್ರೇಮ ಬೆಳೆಸಿಕೊಂಡಿದ್ದರು. ಮೇ 6ರಂದು ನಗರ ಹೊರವಲಯದ ಪ್ರದೇಶಕ್ಕೆ ಹೋಗಿ ಎಲ್ಲರೂ ಪಾರ್ಟಿ ಮಾಡಿದ್ದರು. ನಂತರ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಮೇ 12ಕ್ಕೆ ಬಾಲಕಿಯ ಪಾಲಕರಿಗೆ ಅನುಮಾನ ಬಂದಿದ್ದರಿಂದ ದೂರು ದಾಖಲಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.