ಬೆಳಗಾವಿ: ‘ಹೊಯ್ಸಳ ಚಲನಚಿತ್ರ ಮಾರ್ಚ್ 30ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಈ ಭಾಗದ ಪ್ರೇಕ್ಷಕರು ವೀಕ್ಷಿಸಿ, ಪ್ರೋತ್ಸಾಹಿಸಬೇಕು’ ಎಂದು ನಟ ಡಾಲಿ ಧನಂಜಯ ಕೋರಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತಕ್ಕೆ ಭಾನುವಾರ ಆಗಮಿಸಿ, ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಬೆಳಗಾವಿ, ಅಥಣಿ, ಸಂಕೇಶ್ವರದಲ್ಲಿ ‘ಹೊಯ್ಸಳ’ ಚಲನಚಿತ್ರದ ಚಿತ್ರೀಕರಣ ನಡೆದಿದೆ. ಆ ವೇಳೆ, ಇಲ್ಲಿನ ಜನರು ಬಹಳಷ್ಟು ಪ್ರೀತಿ ತೋರಿಸಿದ್ದರು. ಕುಟುಂಬ ಸಮೇತರಾಗಿ ಚಲನಚಿತ್ರ ಮಂದಿರಕ್ಕೆ ಹೋಗಿ, ಚಿತ್ರ ನೋಡಿ ಆನಂದಿಸಬೇಕು’ ಎಂದು ಹೇಳಿದರು.
ನೆಚ್ಚಿನ ನಟನನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ನಟ ಆರ್.ಅಭಿಲಾಷ, ಕರವೇ ಮುಖಂಡ ಉಮೇಶ ಆಚಾರ್ಯ, ರವಿ ಪೂಜಾರಿ, ಬಾಳಾಸಾಹೇಬ ಉದಗಟ್ಟಿ ಇತರರಿದ್ದರು.
ಬಳಿಕ, ನಂದಗಡಕ್ಕೆ ತೆರಳಿ, ಕ್ರಾಂತಿವೀರ ರಾಯಣ್ಣನ ಪ್ರತಿಮೆಗೆ ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.