ಬಂಧನ
(ಸಾಂದರ್ಭಿಕ ಚಿತ್ರ)
ಬೆಳಗಾವಿ: ಟ್ರ್ಯಾಕ್ಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉದ್ಯಮಬಾಗ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಜೈತುನಮಾಳದ ಮಲ್ಲೇಶ ಸಿದ್ದಪ್ಪ ಕುರಬಗಟ್ಟಿ(22), ಮಚ್ಛೆಯ ತೋಹಿದ್ ಇಸ್ಲಾಂ ಚಂದಗಡಕರ(19) ಬಂಧಿತರು. ಅವರಿಂದ ₹10.50 ಲಕ್ಷ ಮೌಲ್ಯದ ಎರಡು ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ.
ತಮ್ಮ ಟ್ರ್ಯಾಕ್ಟರ್ ಕಳುವಾದ ಬಗ್ಗೆ ಉದ್ಯಮಬಾಗದ ಚನ್ನಮ್ಮ ನಗರದ ಒಂದನೇ ಹಂತದ ನಿವಾಸಿ ಚಂದ್ರಶೇಖರ ಅಗಸಗಿ ಅವರು, ಉದ್ಯಮಬಾಗ್ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.