ADVERTISEMENT

ಕಾಗವಾಡ | ದ್ರಾಕ್ಷಿ ಬೆಳೆ: ₹ 22 ಕೋಟಿ ವಿಮೆ ಹಣ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 14:41 IST
Last Updated 1 ಅಕ್ಟೋಬರ್ 2024, 14:41 IST
ದ್ರಾಕ್ಷಿ ಬೆಳೆ ಹಾನಿ ಪರಿಹಾರ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ರಾಜು ಕಾಗೆ ಅವರನ್ನು ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ  ಶಾಸಕರ ಕಚೇರಿಯಲ್ಲಿ ದ್ರಾಕ್ಷಿ ಬೆಳಗಾರರು ಸನ್ಮಾನಿಸಿದರು
ದ್ರಾಕ್ಷಿ ಬೆಳೆ ಹಾನಿ ಪರಿಹಾರ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ರಾಜು ಕಾಗೆ ಅವರನ್ನು ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ  ಶಾಸಕರ ಕಚೇರಿಯಲ್ಲಿ ದ್ರಾಕ್ಷಿ ಬೆಳಗಾರರು ಸನ್ಮಾನಿಸಿದರು   

ಕಾಗವಾಡ: ಕಳೆದ ವರ್ಷ ಮಳೆಗಾಲದಲ್ಲಿ ದ್ರಾಕ್ಷಿ ಬೆಳೆಗೆ ಸಂಭವಿಸಿದ ಹಾನಿಯ ಕಾರಣ ಕಾಗವಾಡ ಶಾಸಕರಾದ ರಾಜು ಕಾಗೆ ಅವರ ವಿಶೇಷ ಪ್ರಯತ್ನದಿಂದ ಟಾಟಾ ಎಐಜಿ ವಿಮಾ ಕಂಪನಿಯ ಮೂಲಕ ₹ 22 ಕೋಟಿ ಪರಿಹಾರ ಅನುದಾನ ಮಂಜೂರುಗೊಂಡಿದ್ದು, ದ್ರಾಕ್ಷಿ ಬೆಳೆಗಾರರು ಶಾಸಕರನ್ನು ಸತ್ಕರಿಸಿದರು.

ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜು ಕಾಗೆ ಮಾತನಾಡಿ, ‘ಈ ಪರಿಹಾರದ ಶೇ 90 ರಷ್ಟು ಮೊತ್ತವನ್ನು ಈಗಾಗಲೇ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಮುಂದಿನ ಹಂತದಲ್ಲಿ ಶೇ100 ರಷ್ಟು ಪರಿಹಾರ ನೀಡುವಂತೆ ಸರ್ಕಾರದೊಂದಿಗೆ ಸಮಾಲೋಚನೆ ಮಾಡಲಾಗುತ್ತದೆ’ ಎಂದರು.

ಮಂಗಸೂಳಿ ದ್ರಾಕ್ಷಿ ಬೆಳೆಗಾರರ ಸಂಘದ ಸಂಚಾಲಕ ಚಿದಾನಂದ ಮಾಳಿ, ‘ಭವಿಷ್ಯದಲ್ಲಿ ವಿಮಾ ಕಂಪನಿಗಳು ಪ್ರತಿ ಹೆಕ್ಟೇರ್ ಕ್ಷೇತ್ರಕ್ಕೆ ₹ 5 ಲಕ್ಷ ವಿಮೆಗಾಗಿ ಪರಿಹಾರ ನೀಡಬೇಕು. ಅದರ ಪ್ರೀಮಿಯಂ ಭರಿಸಲು ಸಿದ್ಧರಿದ್ದೇವೆ’ ಎಂಬ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.

ADVERTISEMENT

ಕಾಗವಾಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಕೃಷ್ಣಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೊಡೆ, ದ್ರಾಕ್ಷಿ ಬೆಳೆಗಾರರಾದ ಪಾಂಡುರಂಗ ಸುರ್ಯವಂಶಿ, ಪರಶುರಾಮ ಸಾವಂತ, ಸಂಜಯ ಸಮಜಗೆ, ಉದಯ ಪಾಟೋಳೆ, ಭಾಹುಸಾಹೇಬ ಸಮಜಗೆ, ಸುರೇಶ ಕುಂಬಾರ, ಬಂಡು ಕೋರೆ, ಚಂದ್ರಕಾAತ ಮಾಳಿ, ರಾಮದೇವ ಬಜಂತ್ರಿ, ರಾಜೇಶ ಕುಟವಾಡೆ, ಮಹೇಶ ಪುಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.