
ಸಾವು (ಪ್ರಾತಿನಿಧಿಕ ಚಿತ್ರ)
ಘಟಪ್ರಭಾ (ಗೋಕಾಕ): ಸಕ್ಕರೆ ಕಾರ್ಖಾನೆಗೆ ಸಾಗಿಸಲು ಕಟಾವು ಮಾಡಲಾದ ಕಬ್ಬು ತುಂಬಿಕೊಂಡು ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದ ಟ್ರ್ಯಾಕ್ಟರ್‌ವೊಂದರ ಟ್ರಾಲಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಡಲತಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಬಾಳೇಶ ಸಿದ್ದ ನಂದಿ (51) ಮೃತರು. ವಡೇರಹಟ್ಟಿ-ಹುಣಶ್ಯಾಳಿ ಪಿಜಿ ರಸ್ತೆಯಲ್ಲಿ ಜ.2ರಂದು ರಾತ್ರಿ ಘಟನೆ ಸಂಭವಿಸಿದೆ.
ಟ್ರ್ಯಾಕ್ಟರ್ ಚಾಲಕ ತಲೆಮರೆಸಿಕೊಂಡಿದ್ದು, ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಸಾವು
ಗೋಕಾಕ: ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ನಬಾಪೂರ ಗ್ರಾಮ ವ್ಯಾಪ್ತಿಯ ಶಿಲ್ತಿಭಾಂವಿ ಕ್ರಾಸ್ ಮತ್ತು ಖನಗಾಂವ ರಸ್ತೆಯಲ್ಲಿ ಜ.1ರಂದು ರಾತ್ರಿ ನಡೆದಿದೆ.
ನಬಾಪೂರ ಗ್ರಾಮದ ಶಿವನಗೌಡ ಶಂಕರಗೌಡ ಪಾಟೀಲ (40) ಮೃತರು.
ಚಾಲಕ, ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಘನಸಾವಂಗಿ ತಾಲ್ಲೂಕಿನ ಅಂತರವಳಿ ಗ್ರಾಮದ ತಾಪೇಶ್ವರ ರತನ ಗಿರಿ ವಿರುದ್ಧ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗಳ: ಕೊಲೆ ಯತ್ನ
ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನಿನ ಒಡೆತನ ಮತ್ತು ಸ್ವಾಧೀನಕ್ಕೆ ಸಂಬಂಧಿಸಿ ನೆರೆಹೊರೆಯ ಕೃಷಿಕರ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದ ಕುರಿತು ಅಂಕಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.31ರಂದು ಲಾಂಗ್ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಚನ್ನಯ್ಯ ಮಲ್ಲಯ್ಯ ಹಿರೇಮಠ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾದೇವ ಸಿದ್ದಯ್ಯ ಹಿರೇಮಠ, ಕಾಶವ್ವ ಮಹಾದೇವ ಹಿರೇಮಠ, ಮಲ್ಲಯ್ಯ ಮಹಾದೇವ ಹಿರೇಮಠ ಮತ್ತು ಬಸಯ್ಯ ಮಹಾದೇವ ಹಿರೇಮಠ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.