ನಿಪ್ಪಾಣಿ: ಕಳೆದ 4 ತಿಂಗಳಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದಿದ್ದ ಮೂವರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿ, ತನಿಖೆ ನಡೆಸಿ ಸೌಂದಲಗಾ ಗ್ರಾಮದಲ್ಲಿ ಮುಚ್ಚಿಟ್ಟಿದ್ದ ₹6.60 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಿದ್ದಾರೆ.
ಹುಕ್ಕೇರಿ ತಾಲ್ಲೂಕಿನ ಸೋಲಾಪೂರ ಗ್ರಾಮದ ಸುನೀಲ ರಾಜೇಂದ್ರ ಮುರಗುಡೆ(23), ಪೃಥ್ವಿ ಬಸವರಾಜ ಖೋತ(23) ಮತ್ತು ಉದಯ ಮಹಾರುದ್ರ ಗಣಾಚಾರಿ(19) ಬಂಧಿತರು.
ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಶಿವರಾಜ ನಾಯಿಕವಾಡಿ ಅವರು ಜುಲೈ 19ರಂದು ಸಂಜೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ತಾಲ್ಲೂಕಿನ ಮಾಂಗೂರ ತಿರುವು ಬಳಿ ಮೂವರು ಕಳವು ಮಾಡಿದ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದರು, ಅವರನ್ನು ವಿಚಾರಣೆಗೊಳಪಡಿಸಿದಾಗ ತನಿಖೆ ನಡೆಸಿದರು.
ಪೊಲೀಸರ ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್.ಪಿ.ಶೃತಿ ಕೆ., ಬಸನಗೌಡ ಬಸರಗಿ, ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಶ್ಲಾಘಿಸಿದ್ದಾರೆ.
ಸ್ಥಳೀಯ ಠಾಣೆಯ ಸಿಪಿಐ ಬಿ.ಎಸ್.ತಳವಾರ ನೇತೃತ್ವದಲ್ಲಿ ಪಿಎಸ್‍ಐ ಶಿವರಾಜ ನಾಯಿಕವಾಡಿ, ಸಿಬ್ಬಂದಿಯಾದ ಎಎಸ್‍ಐ ಎಸ್ಎ.ತೊಲಗಿ, ಎಸ್.ಎಸ್.ಕಾಡಗೌಡರ, ಆರ್.ಆರ್.ಪಾಟೀಲ, ಎಂ.ಎಫ್.ನದಾಫ, ಎ.ವಿ.ಚಂದನಶಿವ, ರಾಘವೇಂದ್ರ ಮೇಲ್ಗಡೆ, ಪಿ.ಎಸಲ್. ಕುದರಿ, ಪಿ.ಟಿ. ಸಿದ್ದಾಟಗಿಮಠ, ಬೆಳಗಾವಿಯ ಟೆಕ್ನಿಕಲ್ ಸೆಲ್‍ನ ವಿನೋದ ಟಕ್ಕನ್ನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.