ADVERTISEMENT

ರಕ್ತ ದಾನದಿಂದ ಶಕ್ತಿ ಕುಗ್ಗುವುದಿಲ್ಲ: ಡಾ.ಎಸ್.ಸಿ. ಧಾರವಾಡ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 11:04 IST
Last Updated 14 ಜೂನ್ 2020, 11:04 IST
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ ಶಿಬಿರ ನಡೆಯಿತು
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ ಶಿಬಿರ ನಡೆಯಿತು   

ಬೆಳಗಾವಿ: ‘ರಕ್ತ ದಾನದಿಂದ ನಮ್ಮ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ. ಶಕ್ತಿ ಕುಂದುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ’ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ತಿಳಿಸಿದರು.

ಆಸ್ಪತ್ರೆಯಲ್ಲಿ ಭಾನುವಾರ ನಡೆದ ವಿಶ್ವ ರಕ್ತ ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾನಗಳಲ್ಲಿ ರಕ್ತ ದಾನ ಶ್ರೇಷ್ಠವಾಗಿದೆ. ಪದೇ ಪದೇ ಕೊಡಬಹುದಾಗಿದೆ. ವೈದ್ಯ ವಿಜ್ಞಾನವು ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾದ್ಯವಾಗುತ್ತಿಲ್ಲ. ಮಾನವನಿಂದ ಮಾನವನಿಗೆ ಮಾತ್ರ ಕೊಡಬಹುದಾಗಿದೆ. ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು’ ರಕ್ತ ದಾನ ಮಾಡುವದನ್ನು ಪ್ರೇರೇಪಿಸಬೇಕಾಗಿದೆ ಎಂದರು.

ADVERTISEMENT

ವೈದ್ಯರಾದ ಡಾ.ಮಹಮ್ಮದ್‌ಜಿಯಾ ಗುತ್ತಿ, ಡಾ.ಕೃಷ್ಣ ಟಿ.ಜಿ., ಡಾ.ಪ್ರೇಮಾ ಮೆನಶಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಇತಾಪೆ, ರಕ್ತ ದಾನಿಗಳಾದ ಈರಣ್ಣ ಕಲ್ಲೊಳ್ಳಿ ಹಾಗೂ ಬಸವರಾಜ ಅಷ್ಟೇಕರ, ತಂತ್ರಜ್ಞ ಮಹಾದೇವ ವಾಲಿಶೆಟ್ಟಿ ಇದ್ದರು.

11 ಮಂದಿ ರಕ್ತ ದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.