ಕೌಜಲಗಿ: ಪಟ್ಟಣದ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ದಾನಿಗಳು ₹55 ಸಾವಿರ ಮೌಲ್ಯದ ಪುಸ್ತಕಗಳನ್ನು ಬುಧವಾರ ದೇಣಿಗೆಯಾಗಿ ನೀಡಿದ್ದಾರೆ.
ಪಟ್ಟಣದ ಗ್ರಂಥಾಲಯದಲ್ಲಿ ಇಲ್ಲಿಯ ಕನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ನಿರ್ದೇಶನದ ಮೇರೆಗೆ ಸಂಸ್ಥೆಯ ಆಡಳಿತ ಅಧಿಕಾರಿ ಮಂಜುನಾಥ ಸಣ್ಣಕ್ಕಿ ಅವರು ₹32,500 ವೆಚ್ಚದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ನೀಡಿದರು. ಡಾ. ಮಹಾದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢಶಾಲೆಯ ಧರ್ಮದರ್ಶಿ ಅರವಿಂದ್ ದಳವಾಯಿ ಅವರ ನಿರ್ದೇಶನದ ಮೇರೆಗೆ ವಸಂತ ದಳವಾಯಿ ಮತ್ತು ಶಾಲೆಯ ಮುಖ್ಯಶಿಕ್ಷಕ ವಿವೇಕ ಹಳ್ಳೂರ ಜಂಟಿಯಾಗಿ ₹22,500 ಮೌಲ್ಯದ ಪುಸ್ತಕಗಳನ್ನು ನೀಡಿದರು.
ದಾನಿಗಳಿಂದ ಕೊಡುಗೆಯಾಗಿ ನೀಡಿದ ಪುಸ್ತಕಗಳನ್ನು ಗ್ರಾಪಂ ಅಧ್ಯಕ್ಷರ ಪರವಾಗಿ ರಾಮಣ್ಣ ಈಟಿ ಮತ್ತು ಪಿಡಿಒ ಪರಶುರಾಮ ಇಟಗೌಡರ ಸ್ವೀಕರಿಸಿ ಗ್ರಂಥಾಲಯದ ಸಹಾಯಕರಿಗೆ ಹಸ್ತಾಂತರಿಸಿದರು. ಕೌಜಲಗಿ ಗ್ರಾಮ ಪಂಚಾಯಿತಿ ವತಿಯಿಂದ ಪುಸ್ತಕದಾನಿಗಳನ್ನು ಸತ್ಕರಿಸಲಾಯಿತು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ನೀಲಪ್ಪ ಕೇವಟಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಉದ್ದಪ್ಪನವರ, ಶಿವಪ್ಪ ಭಜಂತ್ರಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ನೀಲಪ್ಪ ಕೇವಟಿ, ಗ್ರಾ.ಪಂ. ಸದಸ್ಯ ಬಸಪ್ಪ ತಳವಾರ, ತಾ.ಪಂ. ಮಾಜಿ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಹಿರಿಯರಾದ ಮಲ್ಲಪ್ಪ ದಳವಾಯಿ, ವಸಂತ ದಳವಾಯಿ, ಅಶೋಕ ಪೂಜೇರಿ, ಸಾಹಿತಿ ಡಾ.ರಾಜು ಕಂಬಾರ ಸೇರಿದಂತೆ ಗ್ರಾ.ಪಂ. ಸಿಬ್ಬಂದಿ, ಶಿಕ್ಷಕರು, ಯುವಕರು, ಗ್ರಂಥಾಲಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.