ADVERTISEMENT

ಎದೆ ಹಾಲು ಅಮೃತಕ್ಕೆ ಸಮ: ಡಾ.ವರ್ಷಾರಾಣಿ ಮೇತ್ರಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 14:47 IST
Last Updated 6 ಆಗಸ್ಟ್ 2021, 14:47 IST
ಅಥಣಿ ಪಟ್ಟಣದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ.ವರ್ಷಾರಾಣಿ ಮೇತ್ರಿ ಮಾತನಾಡಿದರು
ಅಥಣಿ ಪಟ್ಟಣದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ.ವರ್ಷಾರಾಣಿ ಮೇತ್ರಿ ಮಾತನಾಡಿದರು   

ಅಥಣಿ: ‘ಎದೆ ಹಾಲು ಅಮೃತಕ್ಕೆ ಸಮವಾಗಿದೆ. ಅದು ಹಸುಗೂಸಿಗೆ ರೋಗನಿರೋಧಕ ಶಕ್ತಿ ಒದಗಿಸುತ್ತದೆ’ ಎಂದು ಸ್ತ್ರೀರೋಗ ತಜ್ಞೆ ಡಾ.ವರ್ಷಾರಾಣಿ ಮೇತ್ರಿ ಹೇಳಿದರು.

ಪಟ್ಟಣದ ಮೇತ್ರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಗು ಜನಿಸಿದ ಅರ್ಧ ಗಂಟೆಯಿಂದ ಗಂಟೆಯೊಳಗೆ ತಾಯಿಯು ಎದೆಹಾಲನ್ನು ವ್ಯರ್ಥ ಮಾಡದೆ ಉಣಿಸಬೇಕು. ತಾಯಂದಿರು ಮಹತ್ವವನ್ನು ತಿಳಿದುಕೊಳ್ಳಬೇಕು’ ಎಂದರು.

ADVERTISEMENT

ಉದ್ಘಾಟಿಸಿದ ಡಾ.ಚಿದಾನಂದ ಮೇತ್ರಿ, ‘ಮಗುವಿಗೆ ಎದೆ ಹಾಲು ಹೊರತುಪಡಿಸಿ ಜೇನುತುಪ್ಪ, ಸಕ್ಕರೆ ನೀರು, ಹಸು ಅಥವಾ ಎಮ್ಮೆ ಹಾಲು, ಪೌಡರ್ ಅಥವಾ ಪ್ಯಾಕೆಟ್ ಹಾಲು ನೀಡಬಾರದು. ಗರ್ಭಿಣಿಯರು 3 ತಿಂಗಳ ನಂತರ ಹಾಗೂ 7 ತಿಂಗಳ ಒಳಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ. ಹೆರಿಗೆಯ ನಂತರ ತಾಯಿಗೆ ಕೋವಿಡ್ ಇದೆ ಎಂದು ತಿಳಿದುಬಂದರೆ ಎದೆ ಹಾಲು ಉಣಿಸಬಹುದು. ಆದರೆ, ಸ್ತನ್ಯಪಾನದ ನಂತರ ಮಗುವಿನಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.

ರಾಧಿಕಾ ಶಿಂಧೆ, ಗೀತಾ ಗಾಯಕವಾಡ, ಮಹಾದೇವಿ ಬಳ್ಳೊಳ್ಳಿ, ಸುನೀಲ ಮೇತ್ರಿ, ಗಣೇಶ ಕಾಂಬಳೆ, ಸುಭಾಷ ಕೋಳಿ, ಅಖಿಲಾ ಕಾಂಬಳೆ, ಲಲಿತಾ ಬಾಮನೆ, ರೇಖಾ ಜಾಬಗೌಡರ, ವಿದ್ಯಾ ತನಂಗಿ, ದಾವುದ ನದಾಫ, ಸಚಿನ ಗೌಳಿ, ವಿಜಯ ಚನ್ನರೆಡ್ಡಿ , ಸುನಿಲ ಮಾದರ ಇದ್ದರು.

ಸಾವಿತ್ರಿ ಬಿರಾದಾರ ಸ್ವಾಗತಿಸಿದರು. ಗೀತಾ ಗಾಯಕವಾಡ ನಿರೂಪಿಸಿದರು. ವಂದನಾ ಮರಾಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.