ADVERTISEMENT

ಕಾಗವಾಡ| ಎತ್ತು, ಭೂಮಿ ರೈತನ ಜೀವನಾಡಿ: ಶ್ರೀಮಂತ ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:38 IST
Last Updated 19 ಜನವರಿ 2026, 7:38 IST
<div class="paragraphs"><p>ಕಾಗವಾಡ ತಾಲ್ಲೂಕಿನ ಐನಾಪೂರ ಸಿದ್ದೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ನಡೆದ ಜೋಡು ಎತ್ತಿನ ಶರ್ಯತ್ತ ನಲ್ಲಿ ಒಡುತ್ತಿರುವ ಎತ್ತಿನ ಗಾಡಿಗಳು.</p></div>

ಕಾಗವಾಡ ತಾಲ್ಲೂಕಿನ ಐನಾಪೂರ ಸಿದ್ದೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ನಡೆದ ಜೋಡು ಎತ್ತಿನ ಶರ್ಯತ್ತ ನಲ್ಲಿ ಒಡುತ್ತಿರುವ ಎತ್ತಿನ ಗಾಡಿಗಳು.

   

ಕಾಗವಾಡ: ಎತ್ತು ಹಾಗೂ ಭೂಮಿತಾಯಿ ರೈತನ ಬಾಳನ್ನು ಬೆಳಗುವ ಜೀವನಾಡಿ. ಈ ಎರಡನ್ನು ಯಾರು ಸ್ವಚ್ಚ ಮನಸ್ಸಿನಿಂದ ಪೂಜಿಸುತ್ತಾರೋ ಅವರ ಬಾಳು ಬಂಗಾರವಾಗುತ್ತದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಐನಾಪೂರ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜೋಡೆತ್ತಿನ ಸ್ಪರ್ಧೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿ ಐನಾಪೂರ ಮೊದಲಿನಿಂದಲೂ ಜಾತ್ರೆಯಲ್ಲಿ ದನಗಳ ಜಾತ್ರೆ, ವಿವಿಧ ಸ್ವರ್ಧೆ ಹಾಗೂ ಭವ್ಯ ಕೃಷಿಮೇಳವನ್ನು ಆಯೋಜಿಸುತ್ತಾ ಬಂದಿದೆ. ಈ ಭಾಗದ ಲಕ್ಷಾಂತರ ಜನರಿಗೆ ತುಂಬಾ ಅನುಕೂಲವಾಗಿದೆ. ಧಾರವಾಡದಲ್ಲಿ ಕೃಷಿ ಮೇಳವನ್ನು ಸರ್ಕಾರದ ಅನುದಾನದಿಂದ ಆಯೋಜಿಸಲಾಗುತ್ತದೆ. ಆದರೆ, ಉತ್ತರ ಕರ್ನಾಟಕದಲ್ಲಿಯೇ ರೈತರ ಸಹಾಯ ಸಹಕಾರದಿಂದ ಬೃಹತ್‌ ಕೃಷಿ ಪ್ರದರ್ಶನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ADVERTISEMENT

ಜೋಡು ಎತ್ತಿನ ಗಾಡಿ ಶರತ್ತಿನಲ್ಲಿ ಪ್ರಥಮ ಸ್ಥಾನ ಐನಾಪೂರ ಪಟ್ಟಣದ ಸಿದ್ದೇಶ ಗಾಣಿಗೇರ ಅವರ ಎತ್ತುಗಳು ₹100001 ಬಹುಮಾನ ಪಡೆದವು. ದ್ವಿತೀಯ ಸ್ಥಾನ ಕಲೂತಿ ಗ್ರಾಮದ ಬಾಳು ನಾಯಿಕ ಅವರ ಎತ್ತುಗಳು ₹70001 ಬಹುಮಾನ ಪಡೆದವು. ತೃತೀಯ ಸ್ಥಾನ ಶೇಡಬಾಳ ಗ್ರಾಮದ ಆಕಾಶ ಪಾಟೀಲ ಅವರ ಎತ್ತುಗಳು ₹40001ರೂ ಬಹುಮಾನ ಪಡೆದವು. ಚತುರ್ಥ ಸ್ಥಾನ ಅಥಾಲಟಿ ಗ್ರಾಮದ ತಾನಾಜಿ ಜಾಧವ ಅವರ ಸ್ಥಾನ ಎತ್ತುಗಳು ₹20001 ರೂ ಬಹುಮಾನ ಪಡೆದುಕೊಂಡವು.

ಜಾತ್ರಾ ಕಮಿಟಿಯ ಅಧ್ಯಕ್ಷ ದಾದಾಸಾಹೇಬ ಜಂತೆನ್ನವರ, ಉಪಾಧ್ಯಕ್ಷ ಸಂತೋಷ ಪಾಟೀಲ, ಅರುಣ ಗಾಣಿಗೇರ, ಸಂಜಯ ಕೂಚನೂರೆ, ಪ್ರಕಾಶ ಕೊರ್ಬು, ರಾಜು ಪೋತದಾರ, ಸುದರ್ಶನ ಜಂತೆನ್ನವರ, ತಮ್ಮಣ್ಣ ಪಾರಶೆಟ್ಟಿ, ಈರಣ್ಣಾ ಬಾಗಾದಿ, ಅಣ್ಣಾಸಾಬ ಡೂಗನವರ, ಕುಮಾರ ಅಪರಾಜ, ತಾತ್ಯಾಸಾಬ ಕೊರ್ಬು, ಬಾಳು ಮಡಿವಾಳ ಭೂಪಾಲ ಮಾನಗಾಂವೆ, ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.