ADVERTISEMENT

ವಿದ್ಯಾ ಸಂವರ್ಧಕ ಮಂಡಳ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷರಾಗಿ ಚಂದ್ರಕಾಂತ ತಾರಳೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 14:09 IST
Last Updated 5 ಸೆಪ್ಟೆಂಬರ್ 2024, 14:09 IST

ನಿಪ್ಪಾಣಿ: ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷರಾಗಿ ಚಂದ್ರಕಾಂತ ತಾರಳೆ, ಉಪಾಧ್ಯಕ್ಷರಾಗಿ ಎಂಜಿನಿಯರ್ ಸುನೀಲ ಪಾಟೀಲ ಹಾಗೂ ರಜತ ಢೋಲೆ ಅವಿರೋಧವಾಗಿ ಆಯ್ಕೆಯಾದರು.

ಆಡಳಿತ ಮಂಡಳಿಯ ಸದಸ್ಯರಾಗಿ ಚಂದ್ರಕಾಂತ ಕೋಠಿವಾಲೆ, ರಾಮಗೊಂಡಾ ಅಲಿಯಾಸ್ ಪಪ್ಪು ಪಾಟೀಲ, ಹರಿಶ್ಚಂದ್ರ ಶಾಂಡಗೆ, ಭರತ ಕುರಬೆಟ್ಟಿ, ಸಮೀರ ಬಾಗೇವಾಡಿ, ಸಂಜಯ ಮೊಳವಾಡೆ, ಅವಿನಾಶ ಪಾಟೀಲ, ಗಣೇಶ ಖಡೇದ, ರಾವಸಾಹೇಬ ಪಾಟೀಲ, ಸಚಿನ ಹಾಲಪ್ಪನವರ, ಪ್ರವೀನ ಪಾಟೀಲ, ಶೇಖರ ಪಾಟೀಲ, ಆನಂದ ಗಿಂಡೆ, ರುದ್ರಕುಮಾರ ಕೋಠಿವಾಲೆ, ವಕೀಲ ಸಂಜಯ ಶಿಂತ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು  ಡಾ.ಎನ್.ಎಸ್. ಮಾದಣ್ಣವರ ಬುಧವಾರ ಘೋಷಿಸಿದರು.

ಸೆ.4ರಂದು ನಡೆಯಬೇಕಾದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಪ್ರತಿ ಸ್ಥಾನಕ್ಕೆ ಒಂದೊಂದು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ಪರಿಶೀಲಿಸಿ ಎಲ್ಲವೂ ಕ್ರಮಬದ್ಧವಾಗಿದ್ದರಿಂದ ಅವರು ಅವಿರೋಧವಾಗಿ 2024 ರಿಂದ 2029ರ ವರೆಗಿನ ಕಾಲಾವಧಿಗೆ  ಚುನಾಯಿತರಾಗಿದ್ದಾರೆಂದು ಮಾದಣ್ಣವರ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.