ADVERTISEMENT

ಮಹಿಳಾ ಶಕ್ತಿಯಿಂದ ಬದಲಾವಣೆ ಸಾಧ್ಯ: ಲಕ್ಷ್ಮಿ ಹೆಬ್ಬಾಳಕರ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 15:23 IST
Last Updated 11 ಅಕ್ಟೋಬರ್ 2021, 15:23 IST
ಬೆಳಗಾವಿ ಗಣೇಶಪುರದ ಮಹಾಲಕ್ಷ್ಮಿ ನಗರದಲ್ಲಿ ‘ಶ್ರೀಮಹಾಲಕ್ಷ್ಮಿ ಮಹಿಳಾ ಮಂಡಳ’ದ ಫಲಕವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಅನಾವರಣಗೊಳಿಸಿದರು
ಬೆಳಗಾವಿ ಗಣೇಶಪುರದ ಮಹಾಲಕ್ಷ್ಮಿ ನಗರದಲ್ಲಿ ‘ಶ್ರೀಮಹಾಲಕ್ಷ್ಮಿ ಮಹಿಳಾ ಮಂಡಳ’ದ ಫಲಕವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಅನಾವರಣಗೊಳಿಸಿದರು   

ಬೆಳಗಾವಿ: ‘ಮಹಿಳೆಯರ ಶಕ್ತಿ ಅಪಾರವಾಗಿದ್ದು, ಅದು ಸಂಘಟನೆ ರೂಪದಲ್ಲಿ ಸೇರಿದರೆ ನೂರ್ಮಡಿಗೊಳ್ಳುತ್ತದೆ. ಅದನ್ನು ಧನಾತ್ಮಕವಾಗಿ ಬಳಸಿಕೊಂಡರೆ ದೇಶದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಾಗುತ್ತದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಹೊರವಲಯದ ಗಣೇಶಪುರದ ಮಹಾಲಕ್ಷ್ಮಿ ನಗರದಲ್ಲಿ ‘ಶ್ರೀಮಹಾಲಕ್ಷ್ಮಿ ಮಹಿಳಾ ಮಂಡಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ದೇಶ ಆಳಿರುವುದನ್ನು ಮತ್ತು ದೊಡ್ಡ ಕ್ರಾಂತಿ ಮಾಡಿರುವುದನ್ನು ನಾವ್ಯಾರೂ ಮರೆಯುವಂತಿಲ್ಲ. ನಾವು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಸಂಘಟನೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ’ ಎಂದರು.

ADVERTISEMENT

ಮಹಿಳಾ ಮಂಡಳದ ಅಧ್ಯಕ್ಷೆ ಅನಿತಾ ಬಿರಾದಾರ, ಪದಾಧಿಕಾರಿಗಳಾದ ಶೀಲಾ ಪಾಟೀಲ, ಶ್ರೀಮತಿ ಹುಕ್ಕೇರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.