ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದ ರೈತನ ಕುಟುಂಬಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ₹ 5 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಂಗ್ರಾಳಿ ಬಿ.ಕೆ. ಗ್ರಾಮದ ನಿವಾಸಿ ಮಾರುತಿ ರಾಮಚಂದ್ರ ಪವಾರ ನಾಲ್ಕು ತಿಂಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ಮೃತಪಟ್ಟಿದ್ದರು. ಶಾಸಕರು ಹೆಸ್ಕಾಂನಿಂದ ಪರಿಹಾರ ಮಂಜೂರು ಮಾಡಿಸಿದ್ದರು.
ಸ್ಥಳೀಯರಾದ ಜಯರಾಮ ಪಾಟೀಲ, ಅನಿಲ ಪಾವಸೆ, ದತ್ತ ಪಾಟೀಲ, ಹೆಸ್ಕಾಂ ಎಂಜಿನಿಯರ್ ಹಮ್ಮಣ್ಣವರ, ನಾಥಾಜಿ ಪಾಟೀಲ, ಉಮೇಶ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.