ADVERTISEMENT

ಚಿಕ್ಕೋಡಿ: ಕೋಥಳಿ-ಕುಪ್ಪಾಣವಾಡಿ ಆಶ್ರಮದ ಸಾಕಾನೆ 'ಉಷಾರಾಣಿ' ಸಾವು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 15:49 IST
Last Updated 10 ಆಗಸ್ಟ್ 2024, 15:49 IST
<div class="paragraphs"><p>ಕೋಥಳಿ-ಕುಪ್ಪಾಣವಾಡಿ ಆಶ್ರಮದ ಸಾಕಾನೆ ಉಷಾರಾಣಿ</p></div>

ಕೋಥಳಿ-ಕುಪ್ಪಾಣವಾಡಿ ಆಶ್ರಮದ ಸಾಕಾನೆ ಉಷಾರಾಣಿ

   

ಚಿಕ್ಕೋಡಿ: ತಾಲ್ಲೂಕಿನ ಕೋಥಳಿ–ಕುಪ್ಪಾನವಾಡಿಯ ಆಚಾರ್ಯ ದೇಶಭೂಷಣ ಜೈನ ಆಶ್ರಮದ ಸಾಕು ಆನೆ ಉಷಾರಾಣಿ (50) ಅನಾರೋಗ್ಯದಿಂದ ಶನಿವಾರ ಸಾವನ್ನಪ್ಪಿದ್ದು, ಆಚಾರ್ಯ ದೇಶ ಭೂಷಣ ಆಶ್ರಮ ಟ್ರಸ್ಟ್ ಹಾಗೂ ಶಾಂತಿಗಿರಿ ಟ್ರಸ್ಟ್ ವತಿಯಿಂದ ಅಂತಿಮ ನಮನಗಳನ್ನು ಸಲ್ಲಿಸಲಾಯಿತು.

ಆಶ್ರಮದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಜೈನ ಮುನಿಗಳು ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ತಿಳಿಸಲಾಗಿದೆ.

ADVERTISEMENT

1977ರಲ್ಲಿ 3 ವರ್ಷದ ಮರಿ ಇದ್ದಾಗ ಶಿವಮೊಗ್ಗದ ಅರಣ್ಯ ಪ್ರದೇಶದಿಂದ ತರಲಾಗಿದ್ದ ಆನೆಗೆ 1978ರಲ್ಲಿ ಉಷಾರಾಣಿ ಎಂದು ನಾಮಕರಣ ಮಾಡಲಾಗಿತ್ತು. ಕಳೆದ 4 ದಶಕಗಳಿಂದ ಉಷಾರಾಣಿ ಆನೆಯನ್ನು ತ್ರಿಲೋಕ ವಿಧಾನ ಪೂಜಾ ಕಾರ್ಯಕ್ರಮ, ಪಂಚಕಲ್ಯಾಣ ಮೆರವಣಿಗೆ, ವಿವಿಧ ಜಾತ್ರಾ ಮಹೋತ್ಸವಗಳ ಮೆರವಣಿಗೆಯಲ್ಲಿ ಬಳಸಲಾಗುತ್ತಿತ್ತು. ರಾಜ್ಯದ ಬೆಳಗಾವಿ, ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆ ಸೇರಿದಂತೆ ಹಲವು ಕಡೆಗೆ ಉಷಾರಾಣಿ ಆನೆಯು ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಅನಾರೋಗ್ಯ ಪೀಡಿತವಾಗಿ ಸಾವನ್ನಪ್ಪಿದ ಉಷಾರಾಣಿ ಆನೆಯ ಮರಣೋತ್ತರ ಪರೀಕ್ಷೆಯ ಬಳಿಕ ಅರಣ್ಯ ಇಲಾಖೆಯ ನಿಯಮಾವಳಿಯಂತೆ ಅಗ್ನಿ ಸ್ಪರ್ಶದ ಮೂಲಕ ಅಂತ್ಯಕ್ರಿಯೆನ್ನು ಆಶ್ರಮದ ಆವರಣದಲ್ಲಿ ರಾತ್ರಿ 8 ಗಂಟೆಗೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಲ್ಲಿ ಶಾಂತಿಗಿರಿ ಟ್ರಸ್ಟ್‌ ಮುಖ್ಯಸ್ಥರಾದ ಪಿ ಆರ್ ಪಾಟೀಲ, ಪಾಸಗೊಂಡ ಪಾಟೀಲ, ಸಂದೀಪ ಪಾಟೀಲ, ದೇಶಭೂಷಣ ಆಶ್ರಮ ಟ್ರಸ್ಟ್ ಅಧ್ಯಕ್ಷ ವರ್ಧಮಾನ ಸದಲಗೆ, ಶಾಂತಿನಾಥ ತಾರದಾಳೆ, ಆದಿನಾಥ ಶೆಟ್ಟಿ, ಇಂದ್ರಜೀತ ಪಾಟೀಲ, ಮಹಾವೀರ ಮುಖರೆ ಸೇರಿದಂತೆ ಕೋಥಳಿ-ಕುಪ್ಪಾನವಾಡಿ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.