ADVERTISEMENT

₹ 2 ಕೋಟಿ ಮೊತ್ತದ 4 ಕಿರು ಏತ ನೀರಾವರಿ ಯೋಜನೆಗಳ ಮಂಜೂರು: ಪ್ರಕಾಶ ಹುಕ್ಕೇರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:47 IST
Last Updated 9 ಫೆಬ್ರುವರಿ 2026, 5:47 IST
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಇಂಗಳಿ, ಯಡೂರವಾಡಿ, ಯಕ್ಸಂಬಾ ಗ್ರಾಮಗಳ ರೈತರಿಗೆ ₹ 2 ಕೋಟಿ ಮೊತ್ತದ ಕಿರು ಏತ ನೀರಾವರಿ ಯೋಜನೆಯ ಮಂಜೂರಾತಿ ಪತ್ರಗಳನ್ನು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ವಿತರಿಸಿದರು
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಇಂಗಳಿ, ಯಡೂರವಾಡಿ, ಯಕ್ಸಂಬಾ ಗ್ರಾಮಗಳ ರೈತರಿಗೆ ₹ 2 ಕೋಟಿ ಮೊತ್ತದ ಕಿರು ಏತ ನೀರಾವರಿ ಯೋಜನೆಯ ಮಂಜೂರಾತಿ ಪತ್ರಗಳನ್ನು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ವಿತರಿಸಿದರು   

ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ 4 ಕಿರು ಏತ ನೀರಾವರಿ ಯೋಜನೆ ಮಂಜೂರಾಗಿದ್ದು, ಸರ್ಕಾರದ ಯೋಜನೆಗಳಿಂದ ಈ ಭಾಗದ ನೂರಾರು ರೈತರಿಗೆ ಅನುಕೂಲವಾಗಲಿದೆ" ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.

ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ₹ 2 ಕೋಟಿ ಮೊತ್ತದ 4 ಕಿರು ಏತ ನೀರಾವರಿ ಯೋಜನೆಗಳ ಮಂಜೂರಾತಿ ಪ್ರತಿಗಳನ್ನು ಶನಿವಾರ ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದರು.

ರೈತರು ಒಣಬೇಸಾಯ ಜಮೀನುಗಳಿಗೆ ಕಿರು ಏತ ನೀರಾವರಿ ಯೋಜನೆ ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದರಿಂದ ಶಾಸಕ ಗಣೇಶ ಹುಕ್ಕೇರಿ ಹಾಗೂ ತಾನು ಪ್ರಯತ್ನ ಮಾಡಿ ಸರ್ಕಾರದಿಂದ ಯೋಜನೆ ಮಂಜೂರು ಮಾಡಿಕೊಂಡು ಬರಲಾಗಿದೆ" ಎಂದರು.

ADVERTISEMENT

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಕೃಷ್ಣಾ ಹಾಗೂ ದೂಧಗಂಗಾ ನದಿಗಳಿಂದ ಪೈಪ್‌ಲೈನ್ ಮೂಲಕ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಒಟ್ಟು 159 ಎಕರೆ ಜಮೀನು ಈ ಯೋಜನೆಯಿಂದ ನೀರಾವರಿಗೊಳಪಡಲಿವೆ" ಎಂದು ಹೇಳಿದರು.

ಹೂವಣ್ಣ ಚೌಗಲೆ, ರಮೇಶ ಮುರಚೆಟ್ಟಿ, ಚಂದ್ರಕಾಂತ ಲಂಗೋಟೆ, ವಿಶ್ವನಾಥ ಮಾನೆ, ಸಂಜು ಪಿರಾಜಿ, ಅಜೀತ ಕಿಲ್ಲೇದಾರ, ಧನಗರ, ಶಿವಾಜಿ ಪವಾರ, ಗಣಪತಿ ಚಿನಮಣೆ, ಸದಾಶಿವ ಕುಂಬಾರ ಸೇರಿದಂತೆ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ ರೈತ ಫಲಾನುಭವಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.