ADVERTISEMENT

ನಾನೇಕೆ ಕರೆಯಲಿ, ಮಾತುಕತೆಗೆ ಅವರೇ ಬರಲಿ: ಸಿಎಂ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 5:03 IST
Last Updated 8 ಏಪ್ರಿಲ್ 2021, 5:03 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   

ಬೆಳಗಾವಿ: ಸಾರಿಗೆ ನೌಕರರು ಮುಷ್ಕರ ಮುಂದುವರಿಸಿರುವುದಕ್ಕೆ ಗರಂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನಾನೇಕೆ ಅವರನ್ನು ಮಾತುಕತೆಗೆ ಕರೆಯಲಿ?. ಬೇಕಿದ್ದರೆ ಮುಷ್ಕರ ಕೈಬಿಟ್ಟು ಅವರೇ ಬರಲಿ ಎಂದು ಹೇಳಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 9ರಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಇಷ್ಟಾದರೂ ಮುಷ್ಕರ ಮಾಡೋರಿಗೆ ಏನೆಂದು ಹೇಳುವುದು? ಕಠಿಣ ಕ್ರಮ ಕೈಗೊಳ್ಳುವುದಷ್ಟೇ ಬಾಕಿ ಇದೆ' ಎಂದರು.

'ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ' ಎಂದರು.

ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕಾಗಿ ಏ.14ರಂದು ಮತ್ತೆ ಬರುತ್ತೇನೆ. ದೊಡ್ಡ ಮಟ್ಟದಲ್ಲಿ ರೋಡ್ ಷೋ ನಡೆಸುತ್ತೇನೆ‌. ಜನ ನಮ್ಮೊಂದಿಗೆ ಇದ್ದಾರೆ. ಬೆಂಬಲ ಕೊಡುತ್ತಿದ್ದಾರೆ. ಕಾಂಗ್ರೆಸ್‌ನವರು ಏನಾದರೂ ಟೀಕೆ ಮಾಡಿಕೊಳ್ಳಲಿ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.