ನಿಪ್ಪಾಣಿ: ‘ಸಹಕಾರ ಮತ್ತು ಸೌಹಾರ್ದ ಕ್ಷೇತ್ರದಲ್ಲಿ ಸಹಕಾರ, ಸಹಯೋಗ, ಸೌಹಾರ್ದತೆಯ ಭಾವನೆಗಳಿರುತ್ತವೆ. ಸಹಕಾರ, ಸೌಹಾರ್ದ ಸಂಸ್ಥೆಗಳು ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವುದರಿಂದ ಇಂತಹ ಸಂಸ್ಥೆಗಳು ಜನಸಾಮಾನ್ಯರ ಉನ್ನತಿಗೆ ಆಧಾರಸ್ತಂಭವಾಗುತ್ತಿವೆ’ ಎಂದು ತಾಲ್ಲೂಕಿನ ಆಡಿ ಗ್ರಾಮದ ಸಂಜೀವನಗಿರಿ ಬೆಟ್ಟದಲ್ಲಿಯ ಶ್ರೀ ದತ್ತಾತ್ರೇಯ ದೇವಸ್ಥಾನದ ಪರಮಾತ್ಮರಾಜ ಮಹಾರಾಜರು ಪ್ರತಿಪಾದಿಸಿದರು.
ಚಿಕ್ಕೋಡಿಯ ಶ್ರೀ ಸಾಯಿ ಸೌಹಾರ್ದ ಸಹಕಾರಿ ಸಂಘದ 29ನೇ ಶಾಖೆಯನ್ನು ತಾಲ್ಲೂಕಿನ ಕುನ್ನೂರು ಗ್ರಾಮದಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
‘ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ ಕುಟುಂಬಗಳು ವಿವಿಧ ಕ್ಷೇತ್ರಗಳಲ್ಲಿ ಜನ ಸಾಮಾನ್ಯರಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅದರ ಭಾಗವಾಗಿ ಕುನ್ನೂರಿನಲ್ಲಿ ಆರಂಭವಾದ ಶಾಖೆಯು ಇಲ್ಲಿನ ರೈತರಿಗೆ ಮತ್ತು ನಿರ್ಗತಿಕರಿಗೆ ಆರ್ಥಿಕ ನೆರವು ನೀಡಲು ಉಪಯುಕ್ತವಾಗಲಿದೆ’ ಎಂದರು.
ನ್ಯಾಯವಾದಿ ಸಂಜಯ ಶಿಂತ್ರೆ ಮಾತನಾಡಿ ‘ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ನೇತೃತ್ವದಲ್ಲಿ 10 ವರ್ಷಗಳಲ್ಲಿ 29 ಶಾಖೆಗಳನ್ನು ಸಂಸ್ಥೆ ಆರಂಭಿಸಿದೆ. ಅಲ್ಪಾವಧಿಯಲ್ಲಿಯೇ ಸಂಸ್ಥೆಯು ₹100 ಕೋಟಿ ಠೇವಣಿಯ ಗುರಿ ತಲುಪಿದೆ’ ಎಂದು ಹೇಳಿದರು.
ಠೇವಣಿಯ ರಸೀದಿಗಳನ್ನು ಪರಮಾತ್ಮರಾಜ ಮಹಾರಾಜರು ವಿತರಿಸಿದರು. ಉಪಾಧ್ಯಕ್ಷ ಷಡಕ್ಷರಿ ಮುಂಗೇರಿ, ಮಹಾರಾಷ್ಟ್ರದ ದತ್ತ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರದಚಂದ್ರ ಪಾಠಕ, ರವಿರಾಜ ಪಾಟೀಲ, ಶ್ರೀ ಸಾಯಿ ಸಹಕಾರ ಸಂಘದ ಅಧ್ಯಕ್ಷ ರಾಜಾರಾಮ ಚೆಂಡಕೆ, ಉಪಾಧ್ಯಕ್ಷ ಬಾಬುರಾವ ಸೋನಾಳೆ, ಸರೋಜ ಜಮದಾಡೆ, ಅಪ್ಪಾಸಾಹೇಬ ಮಗದುಮ, ಬಾಬಾಸಾಹೇಬ ಚೌಗುಲೆ, ದತ್ತಾತ್ರಯ ಶಿಂಧೆ, ಅಜಿತ ಹುಜರೆ, ಮಾರುತಿ ಧನಗರ, ಸಂದೀಪ ಜೋಮಾ, ವಿನಾಯಕ ಚೆಂಡಕೆ, ಸದಾನಂದ ಚೌಗುಲೆ, ಪಾಂಡು ಪಾಟೀಲ ಸೇರಿದಂತೆ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.