ಸಾವು (ಪ್ರಾತಿನಿಧಿಕ ಚಿತ್ರ)
ಗೋಕಾಕ: ತರಕಾರಿ ಸಾಗಿಸುತ್ತಿದ್ದ ಪಿಕ್-ಅಪ್ ವಾಹನ ಬೈಕ್‌ಗೆ ಡಿಕ್ಕಿಯಾದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಳೆದ ನಗರ ಹೊರವಲಯದ ಮಾಲದಿನ್ನಿ ಕ್ರಾಸ್ ಬಳಿ ಇತ್ತೀಚೆಗೆ ನಡೆದಿದೆ.
ಮೃತನನ್ನು ತಾಲ್ಲೂಕಿನ ಬೆಣಚಿನಮರಡಿ ಗ್ರಾಮದ ಪ್ರತಿಕ ಚನ್ನಬಸಪ್ಪ ರುದ್ರಾಪೂರ (26) ಎಂದು ಗುರ್ತಿಸಲಾಗಿದೆ.
ಘಟನೆ ಕುರಿತು ಮೃತನ ತಾಯಿ ಲತಾ ಚನ್ನಬಸಪ್ಪ ರುದ್ರಾಪೂರ, ಪಿಕ್-ಅಪ್ ವಾಹನ ಚಾಲಕ ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ಮಂಜುನಾಥ ಗಣಪತಿ ಖಡಕಭಾಂವಿ ವಿರುದ್ಧ ಗೋಕಾಕ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.