ADVERTISEMENT

ಲತಾ, ಸುತಾರ ಕೊಡುಗೆ ಅಪಾರ: ನಾಗರಾಜ ಭಜಂತ್ರಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 13:55 IST
Last Updated 7 ಫೆಬ್ರುವರಿ 2022, 13:55 IST
ಅಥಣಿಯಲ್ಲಿ ಶಿವಶರಣ ನೂಲಿ ಚಂದಯ್ಯ ಯುವಕ ಮಂಡಲ ವತಿಯಿಂದ ಲತಾ ಮಂಗೇಶ್ಕರ್ ಮತ್ತು ಇಬ್ರಾಹಿಂ ಸುತಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಅಥಣಿಯಲ್ಲಿ ಶಿವಶರಣ ನೂಲಿ ಚಂದಯ್ಯ ಯುವಕ ಮಂಡಲ ವತಿಯಿಂದ ಲತಾ ಮಂಗೇಶ್ಕರ್ ಮತ್ತು ಇಬ್ರಾಹಿಂ ಸುತಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಅಥಣಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಮತ್ತು ಭಾವೈಕ್ಯ ಪ್ರವಚನಕಾರ ಇಬ್ರಾಹಿಂ ಸುತಾರ ಅವರಿಗೆ ಪಟ್ಟಣದ ಶಿವಶರಣ ನೂಲಿ ಚಂದಯ್ಯ ಕೊರಮ ಸಮಾಜ ಯುವಕ ಮಂಡಳದ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.

ಯುವಕ ಮಂಡಲದ ಗೌರವಾಧ್ಯಕ್ಷ ನಾಗರಾಜ ಭಜಂತ್ರಿ, ‘ಭಾರತೀಯ ಚಿತ್ರರಂಗದ ಮೇರು ಪರ್ವತವಾಗಿದ್ದ ಲತಾ ಅವರ ನಿಧನದಿಂದ ಸಂಗೀತ ಕ್ಷೇತ್ರ ಬಡವಾಗಿದೆ. ನಾಡಿನ ಶ್ರೇಷ್ಠ ಸೂಫಿಸಂತ, ಸರ್ವಧರ್ಮಗಳ ಸಾಕಾರ ಮೂರ್ತಿಯಾಗಿದ್ದ ಇಬ್ರಾಹಿಂ ಅವರ ನಿಧನವು ಕೂಡ ತುಂಬಾ ನೋವುಂಟು ಮಾಡಿದೆ. ದೇಶ‌ಕ್ಕೆ ಅವರಿಬ್ಬರ ಕೊಡುಗೆ ಅಪಾರವಾದುದು’ ಎಂದರು.

ಮುಖಂಡ ಬೀರಪ್ಪ ಯಕ್ಕಂಚಿ ಮತ್ತು ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿದರು.

ADVERTISEMENT

ಸಂಜು ಭಜಂತ್ರಿ, ಗೋಪಾಲ ಭಜಂತ್ರಿ, ಶಿವಾನಂದ ಭಜಂತ್ರಿ , ಶ್ರೀಕಾಂತ ಭಜಂತ್ರಿ, ಮುತ್ತುರಾಜ ಭಜಂತ್ರಿ, ಪ್ರಕಾಶ ಭಜಂತ್ರಿ, ಶಶಿಕಾಂತ ಭಜಂತ್ರಿ, ರಮೇಶ ಭಜಂತ್ರಿ, ನಾಗೇಶ ಭಜಂತ್ರಿ, ಭೀಮು ಭಜಂತ್ರಿ , ಮಹೇಶ ಭಜಂತ್ರಿ, ಉಮೇಶ ಭಜಂತ್ರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.