ADVERTISEMENT

ಕೋವಿಡ್‌: ಮೃತರ ಸಂಖ್ಯೆ 85ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 15:41 IST
Last Updated 3 ಆಗಸ್ಟ್ 2020, 15:41 IST

ಬೆಳಗಾವಿ: ಕೋವಿಡ್‌ ಸೋಂಕಿನಿಂದಾಗಿ ಹೊಸದಾಗಿ 10 ಜನ ಮೃತಪಟ್ಟಿದ್ದು, ಒಟ್ಟು ಮೃತರಾದವರ ಸಂಖ್ಯೆ 85ಕ್ಕೆ ತಲುಪಿದೆ. ಬೆಳಗಾವಿಯ 4, ರಾಮದುರ್ಗ ಹಾಗೂ ಅಥಣಿಯ ತಲಾ ಇಬ್ಬರು, ಬೈಲಹೊಂಗಲ, ಚಿಕ್ಕೋಡಿಯ ಒಬ್ಬೊಬ್ಬರು ಮೃತರಾಗಿದ್ದಾರೆ.

ಬೆಳಗಾವಿಯ 56 ವರ್ಷದ ಪುರುಷ (ಪಿ–143551), 68 ವರ್ಷದ ವೃದ್ಧ (ಪಿ– 134414), 56 ವರ್ಷದ ಪುರುಷ (ಪಿ–122317) ಹಾಗೂ 47 ವರ್ಷದ ವೃದ್ಧೆ (ಪಿ–114997), ರಾಮದುರ್ಗದ 50 ವರ್ಷದ ಪುರುಷ (ಪಿ–138026) ಹಾಗೂ 51 ವರ್ಷದ ಪುರುಷ (ಪಿ–143683), ಅಥಣಿಯ 70 ವರ್ಷದ ವೃದ್ಧ (ಪಿ– 94282) ಹಾಗೂ 70 ವರ್ಷದ ವೃದ್ಧ (ಪಿ–120136), ಬೈಲಹೊಂಗಲದ 54 ವರ್ಷದ ಪುರುಷ (ಪಿ– 103335), ಚಿಕ್ಕೋಡಿಯ 75 ವರ್ಷದ ಪುರುಷ (ಪಿ–137321) ಮೃತರಾಗಿದ್ದಾರೆ.

60 ಜನರಿಗೆ ಸೋಂಕು

ADVERTISEMENT

ಜಿಲ್ಲೆಯ 60 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಇದುವರೆಗೆ ಸೋಂಕಿತರಾದವರ ಸಂಖ್ಯೆ 3,688ಕ್ಕೆ ತಲುಪಿದೆ. ಬೆಳಗಾವಿ ತಾಲ್ಲೂಕಿನ 38, ರಾಯಬಾಗ 1, ಬೈಲಹೊಂಗಲ 6, ರಾಮದುರ್ಗ 1 ಚಿಕ್ಕೋಡಿ 4, ಗೋಕಾಕ 1, ಖಾನಾಪುರ 8 ಹಾಗೂ ಹುಕ್ಕೇರಿಯಲ್ಲಿ 1 ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೆ 1,080 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 868 ಜನರ ಗಂಟಲು ದ್ರವ ಮಾದರಿಗಳ ಫಲಿತಾಂಶ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.