ADVERTISEMENT

ನೋಟು ಎಣಿಸುವ ಕೈಗಳಿಗೆ ಲಸಿಕೆಯ ಬಲ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 7:26 IST
Last Updated 16 ಜೂನ್ 2021, 7:26 IST
ಬೆಳಗಾವಿಯಲ್ಲಿ ಬ್ಯಾಂಕ್‌ ನೌಕರರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್. ಹೆಗಡೆ ಚಾಲನೆ ನೀಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ. ರಾಹುಲ್ ಇದ್ದಾರೆ
ಬೆಳಗಾವಿಯಲ್ಲಿ ಬ್ಯಾಂಕ್‌ ನೌಕರರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್. ಹೆಗಡೆ ಚಾಲನೆ ನೀಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ. ರಾಹುಲ್ ಇದ್ದಾರೆ   

ಬೆಳಗಾವಿ: ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಮಾರ್ಗದರ್ಶಿ ಬ್ಯಾಂಕ್ ಸಹಯೋಗದಲ್ಲಿ ನಗರದ ಬ್ಯಾಂಕ್ ಉದ್ಯೋಗಿಗಳಿಗೆ ಕೋವಿಡ್–19 ರೋಗ ನಿರೋಧಕ ಲಸಿಕೆ ನೀಡುವ ಶಿಬಿರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ನಡೆಯಿತು.

ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಸಭಾಭವನದಲ್ಲಿ ನಡೆದ ಶಿಬಿರವನ್ನು ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್. ಹೆಗೆಡೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ‘ಕೋವಿಡ್‌ನಿಂದಾಗಿ ಉದ್ಭವಿಸಿರುವ ತುರ್ತು ಸ್ಥಿತಿಯಲ್ಲೂ ಬ್ಯಾಂಕಿನ ಸಿಬ್ಬಂದಿ ಗ್ರಾಹಕರಿಗೆ ಅನಿರ್ಬಂಧಿತ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ದಿನವೂ ದುಗುಡ ಮತ್ತು ಸವಾಲಿನಿಂದ ಕಾರ್ಯನಿರ್ವಹಿಸುವ ಅವರಿಗೆ ಲಸಿಕೆ ಆತ್ಮವಿಶ್ವಾಸದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಲಿದೆ’ ಎಂದರು.

ADVERTISEMENT

‘ಬ್ಯಾಂಕ್‌ಗಳು ಅದರಲ್ಲೂ ಗ್ರಾಮೀಣ ಬ್ಯಾಂಕ್‌ಗಳು ಪ್ರಸ್ತುತ ಮಳೆಗಾಲದ ಅವಧಿಯಲ್ಲಿ ರೈತರಿಗೆ ಅಡೆತಡೆಯಿಲ್ಲದೆ ಬೆಳೆ ಸಾಲ ಮತ್ತಿತರ ಸೇವೆಗಳನ್ನು ನೀಡಬೇಕಿರುವುದರಿಂದ, ಲಸಿಕೆಯು ಉದ್ಯೋಗಿಗಳಿಗೆ ರಕ್ಷಣೆಯ ಜೊತೆಗೆ ಹೊಸ ಹುರುಪು ನೀಡಲಿದೆ’ ಎಂದು ಆಶಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ. ರಾಹುಲ್, ‘ಕೊರೊನಾ ತಡೆಗೆ ಲಸಿಕೆಯು ಸಂಜೀವಿನಿಯಾಗಿದೆ. ಬ್ಯಾಂಕ್ ನೌಕರರು ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸಬೇಕಾಗಿರುವುದರಿಂದ ಆದ್ಯತೆಯ ಮೇರೆಗೆ ಅವರಿಗೆ ಲಸಿಕೆ ನೀಡಲಾಗುತ್ತಿದೆ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಬಿಡಬಾರದು. ಕೈಗಳ ಸ್ವಚ್ಛತೆಗೂ ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.