
ಬೆಳಗಾವಿ: ‘ಪ್ರಸ್ತುತ ಕಾಲಘಟ್ಟದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆ. ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕ್ರಿಕೆಟ್ ಟೂರ್ನಿ ಆಯೋಜಿಸಿರುವುದು ಶ್ಲಾಘನೀಯ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಜನ್ಮದಿನ ಪ್ರಯುಕ್ತ, ಮಹಾಂತೇಶ ಕವಟಗಿಮಠ ಫೌಂಡೇಷನ್ ಆಯೋಜಿಸಿರುವ ಅಖಿಲ ಭಾರತ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಿಗೆ(ಎರಡನೇ ಆವೃತ್ತಿಯ ಮಹಾಂತೇಶ ಕವಟಗಿಮಠ ಟ್ರೋಫಿ) ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಕ್ರೀಡೆಗಳಿಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಆದರೆ, ಇಂದು ಕ್ರೀಡಾಕೂಟಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಿರುವಾಗ ಕ್ರೀಡೆಯತ್ತ ಯುವಜನರನ್ನು ಸೆಳೆಯಲು ಟೂರ್ನಿ ಆಯೋಜಿಸಿರುವುದು ಸಂತಸದ ವಿಚಾರ’ ಎಂದರು.
ಮಹಾಂತೇಶ ಕವಟಗಿಮಠ, ‘ರಾಜ್ಯ, ರಾಷ್ಟ್ರ ಮಾತ್ರವಲ್ಲ; ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ನಲ್ಲಿ ಸಾಧನೆ ಮಾಡಬಲ್ಲ ಸಾಕಷ್ಟು ಪ್ರತಿಭೆಗಳೂ ಸ್ಥಳೀಯಮಟ್ಟದಲ್ಲಿವೆ. ಅಂಥವರನ್ನು ಪ್ರೋತ್ಸಾಹಿಸಲು ಈ ಟೂರ್ನಿಗೆ ಆಯೋಜಿಸಿದ್ದೇವೆ’ ಎಂದರು.
ಉಪಮೇಯರ್ ವಾಣಿ ಜೋಶಿ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ಅಭಿಜಿತ ಜವಳಕರ, ಗಿರೀಶ ಧೋಂಗಡಿ, ರೇಷ್ಮಾ ಪಾಟೀಲ, ಆನಂದ ಚವ್ಹಾಣ, ಮುಖಂಡರಾದ ಎಂ.ಬಿ.ಝಿರಲಿ, ಗೀತಾ ಸುತಾರ, ಶಿವಾಜಿ ಸುಂಠಕರ ಇತರರಿದ್ದರು.
ಜ.4ರಿಂದ 16ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಹೊರರಾಜ್ಯಗಳ ತಂಡಗಳೂ ಸೇರಿ 48 ತಂಡ ಭಾಗವಹಿಸಿವೆ.
ಬೆಳಗಾವಿಯಲ್ಲಿ ಇಂಥ ದೊಡ್ಡಮಟ್ಟದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಸ್ಥಳೀಯ ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕುಮಂಗೇಶ ಪವಾರ ಮೇಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.