ಪಾಲಬಾವಿ: ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಸೋಮವಾರ ಬಂದಿದ್ದ ಶ್ರೀಶೈಲ ಪೀಠದ ಪಂಡಿತಾರಾಧ್ಯ ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಇಲ್ಲಿನ ಸಿದ್ಧಾರೂಢ ಮಠದ ಪೀಠಾಧಿಪತಿ ಲೀಲಾವಧೂತ ಶಿವಾನಂದ ಸ್ವಾಮೀಜಿ ₹ 100 ಮುಖಬೆಲೆಯ ಹಲವು ನೋಟುಗಳಿಂದ ‘ವಿತ್ತಾಭಿಷೇಕ’ ಮಾಡಿ ಭಕ್ತಿ ಪ್ರದರ್ಶಿಸಿದರು.
ಇದಕ್ಕೂ ಮುನ್ನ ಅವರನ್ನು ಕುಂಭಮೇಳದೊಂದಿಗೆ ಮೆರವಣಿಗೆಯಲ್ಲಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು. ಕಲಾತಂಡಗಳು ಮೆರುಗು ನೀಡಿದವು. ಭರಮಲಿಂಗೇಶ್ವರ ಕರ್ತೃ ಗದ್ದುಗೆ ಮತ್ತು ಸಿದ್ಧಾರೂಢ ಮೂರ್ತಿಗೆ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ನಡೆದ ಸತ್ಸಂಗದಲ್ಲಿ ಮಾತನಾಡಿದ ಶ್ರೀಶೈಲ ಶ್ರೀ, ‘ಮಠಗಳು ಧರ್ಮದ ಮಾರ್ಗಗಳನ್ನು ತೋರಿಸುವ ಕೇಂದ್ರಗಳಾಗಿವೆ. ಭಾರತದಲ್ಲಿ ಸಾಂಸ್ಕೃತಿಕ ಸಾಮರಸ್ಯ ಇರುವುದರಿಂದಲೇ ಏಕತೆ, ಸಮಗ್ರತೆ, ಅಖಂಡತೆ ಉಳಿಯಲು ಸಾಧ್ಯವಾಗಿದೆ. ನದಿಗಳು ಯಾವ ದಿಕ್ಕಿನಿಂದ ಹರಿದರೂ ಕೊನೆಗೆ ಸಮುದ್ರವನ್ನು ಸೇರುತ್ತವೆಯೋ ಅದೇ ರೀತಿ ಎಲ್ಲ ಧರ್ಮದ ಸಂದೇಶವು ಶಿವನನ್ನೇ ಸೇರುತ್ತವೆ. ಭಾರತೀಯ ಸಂಸ್ಕೃತಿಯು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತದೆ’ ಎಂದರು.
ಮಹಾದೇವ ಮರಡಿ ಹಾಗೂ ಶಂಕರ ಜನವಾಡ ಕುಟುಂಬದವರು ಶ್ರೀಗಳ ಪಾದಪೂಜೆ ನೆರವೇರಿಸಿದರು.
ನಿವೃತ್ತ ಹಿರಿಯ ಶಿಕ್ಷಕ ಚಂದ್ರಯ್ಯ ಹಿರೇಮಠ, ಸ್ಥಳೀಯರಾದ ಮಹಾದೇವ ಮರಡಿ, ಪರಪ್ಪ ಕಾಡಶೆಟ್ಟಿ, ಅಣ್ಣಾಸಾಬಗೌಡ ಪಾಟೀಲ, ಶಿವಾನಂದ ಕಾಡಶೆಟ್ಟಿ, ಶಂಭುಲಿಂಗ ಕಾಡಶೆಟ್ಟಿ, ಭರಮಪ್ಪ ಗೋಡಿ, ಗೀರಿಶ ಕ್ಯಾಬಾನಿ, ಮುರುಗೆಪ್ಪ ಮಾದರ, ಅಜ್ಜಯ್ಯ ಹಿರೇಮಠ, ರಾಮಣ್ಣ ಹೆಗಡೆ, ಸಿದ್ದಲಿಂಗಯ್ಯ ಮಠಪತಿ, ಶಂಭುಲಿಂಗ ತುಪ್ಪದ, ಮನೆಪ್ಪ ಯಾದವಾಡ, ಭರಮಪ್ಪ ಮಾನಶೆಟ್ಟಿ, ಶಿವಲಿಂಗ ಕೌಜಲಗಿ, ವಿರೂಪಾಕ್ಷ ಮೂಡಲಗಿ, ಪ್ರಕಾಶಗೌಡ ಪಾಟೀಲ, ಸುರೇಶ ಕಾಡಶೆಟ್ಟಿ, ಸಂಗಮೇಶ ಸೈದಾಪುರ, ರಾಜು ಶಿವಾಪುರ, ಭೀಮಪ್ಪ ಗದ್ದೆನ್ನವರ, ಶಿವಲಿಂಗ ಗುರುಸಿದ್ದನ್ನವರ, ಶಂಕರ ಜನವಾಡ, ನಾಥುನಾಮ ನಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.