ADVERTISEMENT

ಸೈಕಲ್ ರ‍್ಯಾಲಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 7:04 IST
Last Updated 15 ಅಕ್ಟೋಬರ್ 2021, 7:04 IST
ಗೋವಾ ಸಿಎಸ್ಐಎಫ್ ಘಟಕದಿಂದ ಬೆಳಗಾವಿಗೆ ಗುರುವಾರ ಬಂದಿದ್ದ ಸೈಕಲ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದವರಿಗೆ ಸಂಸದೆ ಮಂಗಲಾ ಅಂಗಡಿ ಹೂಮಾಲೆ ಹಾಕಿ ಶುಭ ಕೋರಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ಇದ್ದಾರೆ
ಗೋವಾ ಸಿಎಸ್ಐಎಫ್ ಘಟಕದಿಂದ ಬೆಳಗಾವಿಗೆ ಗುರುವಾರ ಬಂದಿದ್ದ ಸೈಕಲ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದವರಿಗೆ ಸಂಸದೆ ಮಂಗಲಾ ಅಂಗಡಿ ಹೂಮಾಲೆ ಹಾಕಿ ಶುಭ ಕೋರಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ಇದ್ದಾರೆ   

ಬೆಳಗಾವಿ: ಸಿಐಎಸ್‌ಎಫ್‌ ಗೋವಾ ಘಟಕದಿಂದ ನಗರಕ್ಕೆ ಬಂದಿದ್ದ ಸೈಕಲ್ ರ್‍ಯಾಲಿಯು ಗುರುವಾರ ಮಹಾರಾಷ್ಟ್ರದ ಕಡೆಗೆ ಪ್ರಯಾಣ ಬೆಳೆಸಿತು.

ರ‍್ಯಾಲಿಗೆ ಇಲ್ಲಿನ ಕೋಟೆ ಬಳಿ ಸಂಸದೆ ಮಂಗಲಾ ಅಂಗಡಿ ಹಸಿರುನಿಶಾನೆ ತೋರಿ, ಪಾಲ್ಗೊಂಡಿರುವ ಸೈನಿಕರಿಗೆ ಶುಭ ಕೋರಿದರು.

‘ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ ಧೀಮಂತ ನಾಯಕ, ಪ್ರಥಮ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿಯ ನಿಮಿತ್ತ ದೇಶದಾದ್ಯಂತ ‘ರಾಷ್ಟ್ರೀಯ ಏಕತಾ ದಿವಸ’ ಆಚರಿಸಲಾಗುತ್ತಿದೆ. ದೇಶದ ಏಕತೆ ಹಾಗೂ ಸಮಗ್ರತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಈ ಸೈಕಲ್ ರ್‍ಯಾಲಿ ಹಮ್ಮಿಕೊಂಡಿರುವುದು ಅಭಿನಂದನಾರ್ಹ’ ಎಂದರು.

ADVERTISEMENT

‘ರ್‍ಯಾಲಿಯು ಕೇರಳದ ತಿರುವನಂತಪುರಂನಿಂದ ಪ್ರಾರಂಭವಾಗಿದ್ದು, ಗುಜರಾತ್‌ನ ಕವೇಡಿಯಾ ತಲುಪಲಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಉಪ ಕಮಾಂಡೆಂಟ್ ಪ್ರತಿಹಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.