ADVERTISEMENT

ಅಥಣಿ| ತಹಶೀಲ್ದಾರ್‌ ಕಚೇರಿಗೆ ಸವದಿ ದಿಢೀರ್ ಭೇಟಿ!

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 16:04 IST
Last Updated 23 ಜನವರಿ 2020, 16:04 IST
ಅಥಣಿ ತಹಶೀಲ್ದಾರ್‌ ಕಚೇರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ದಿಢೀರ್‌ ಭೇಟಿ ನೀಡಿದರು
ಅಥಣಿ ತಹಶೀಲ್ದಾರ್‌ ಕಚೇರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ದಿಢೀರ್‌ ಭೇಟಿ ನೀಡಿದರು   

ಅಥಣಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಇಲ್ಲಿನ ತಹಶೀಲ್ದಾರ್‌ ಕಚೇರಿಗೆ ಗುರುವಾರ ದಿಢೀರ್‌ ಭೇಟಿ ನೀಡಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕಾಲಕ್ಕೆ ಹಾಜರಾಗಿಲ್ಲದಿರುವುದನ್ನು ಕಂಡು ಸಿಡಿಮಿಡಿಗೊಂಡರು.

10.30ಕ್ಕೆ ಕಚೇರಿಗೆ ಅವರು ಬಂದಾಗ 16 ಮಂದಿ ಬಂದಿರಲಿಲ್ಲ. ‘10.45ರವರೆಗೆ ಕಾದರೂ ಬಾರದಿದ್ದ ಕಾರಣದಿಂದ, ಹಾಜರಾತಿ ಪುಸ್ತಕದಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲವೆಂದು ಬರೆದು ಬಂದಿದ್ದೇನೆ. ಪುಸ್ತಕವನ್ನು ಜಿಲ್ಲಾಧಿಕಾರಿಗೆ ಕಳುಹಿಸುವಂತೆ ಹೇಳಿದ್ದೇನೆ. ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಮುಂದೆಯೂ ಚುರುಕು ಮುಟ್ಟಿಸಲು ಮುನ್ಸೂಚನೆ ನೀಡದೆ ಕಚೇರಿಗಳಿಗೆ ಭೇಟಿ ಕೊಡುತ್ತೇನೆ’ ಎಂದು ತಿಳಿಸಿದರು.

‘ಎಂ.ವಿ. ಬಿರಾದರ ಪಾಟೀಲ, ಸಿ.ಎಸ್. ಕಬಾಡಿ, ಪಿ.ಪಿ. ಜಾಧವ, ಎಸ್.ಎ. ಬಾಗೇವಾಡಿ, ಎಲ್.ಎಸ್. ಕುದರೆಹಾಳ, ಎಸ್.ಜಿ. ಕಿಣಗಿ, ಕೆ.ಬಿ. ಅಡಸೇರಿ, ಎಂ.ಡಿ. ಲಂಗೋಟಿ, ವಿ.ಬಿ. ಕದಮ, ಎ.ಎಲ್. ದಿನಕನ್ನವರ, ಪಿ.ವಿ. ರತ್ನಾಕರ, ದೀಪಾ ಮಠಪತಿ, ಎಸ್.ಎಂ. ಸಾರವಾಡ, ಆರ್‌.ಕೆ. ಮುಜಾವರ, ಎಸ್.ಪಿ. ಮಾದರ, ನೀತಾ ಸುಖಸಾರೆ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ತಹಶೀಲ್ದಾರ್‌ ಎಂ.ಎನ್. ಬಳಗಾರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.