ADVERTISEMENT

ಮದ್ಯವರ್ಜನ ಶಿಬಿರ ಕಾರ್ಯ ಶ್ಲಾಘನೀಯ: ಅಭಿನವ ಮಂಜುನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:16 IST
Last Updated 3 ಜನವರಿ 2026, 4:16 IST
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ದುರದುಂಡೇಶ್ವರ ಸಭಾ ಭವನದಲ್ಲಿ ಶುಕ್ರವಾರ ಜರುಗಿದ 2029ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕ್ಯಾರಗುಡ್ಡ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ದುರದುಂಡೇಶ್ವರ ಸಭಾ ಭವನದಲ್ಲಿ ಶುಕ್ರವಾರ ಜರುಗಿದ 2029ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕ್ಯಾರಗುಡ್ಡ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು   

ಹುಕ್ಕೇರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನ ಜಾಗೃತಿ ವೇದಿಕೆಯವರು ಹಮ್ಮಿಕೊಳ್ಳುತ್ತಿರುವ ಮದ್ಯವರ್ಜನ ಶಿಬಿರಗಳು ಜನರಲ್ಲಿ ತಿಳಿವಳಿಕೆ ಮೂಡಿಸಿ, ದುಶ್ಚಟದಿಂದ ದೂರ ಮಾಡುತ್ತಿರುವುದು ಶ್ಲಾಘನೀಯ ಎಂದು ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಂಕೇಶ್ವರ ದುರದುಂಡೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ 2029ನೇ ಮದ್ಯವರ್ಜನ 8 ದಿನಗಳ ಶಿಬಿರದ ಸಮಾರೋಪದಲ್ಲಿ ಶುಕ್ರವಾರ ಮಾತನಾಡಿದರು.

ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ್, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಪ್ರಕಾಶ ಕಣಗಲಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನಿಪ್ಪಾಣಿಯ ಲಕ್ಷ್ಮಿ ಮಗದುಮ್ಮ, ಪಿ.ಜಿ.ಕೊಣ್ಣೂರ್, ಕೋಶಾಧಿಕಾರಿ ಮಹಾದೇವ ಬರಗಾಲಿ, ಸದಸ್ಯರಾದ ಅಣ್ಣಪ್ಪ ಪರೀಟ್, ಸತೀಶ ಉಪಾಧ್ಯೆ,ಶೋಭಾ ಹಿರೇಮಠ, ನಿವೃತ್ತ ಪ್ರಾಧ್ಯಾಪಕ ಆರ್.ಎ. ಪಾಟೀಲ್ ಅತಿಥಿಗಳಾಗಿದ್ದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರದ ಯಶಸ್ಸಿಗೆ ಶ್ರಮಿಸಿದ ಗಣ್ಯರನ್ನು ಇದೆ ಸಂದರ್ಭದಲ್ಲಿ ಸತ್ಕರಿಸಲಾಯಿತು. ಶಿಬಿರದಲ್ಲಿ 61 ಶಿಬಿರಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಶಿಬಿರದ ಕೋಶಾಧಿಕಾರಿ ಕಿರಣ ನೇಸರಿ, ಜಿಲ್ಲಾ ನಿರ್ದೇಶಕ ವಿಠ್ಠಲ್ ಸಾಲ್ಯಾನ್, ಧಾರವಾಡ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಎನ್.ಭಾಸ್ಕರ್, ಯೋಜನಾಧಿಕಾರಿ ವಿನಾಯಕ, ನಿವೃತ್ತ ಸೈನಿಕ ಮಹೇಶ್, ರೈತ ಮುಖಂಡ ರಾಜೇಂದ್ರ, ಪತ್ರಕರ್ತರಾದ ಆನಂದ ಶಿಂಧೆ, ಗಡಕರಿ, ಮಾಸ್ತಿಹೊಳಿ, ಸಂಜಯ ಪಾಟೀಲ, ವಿ.ಎಲ್.ಪಾಟೀಲ, ರಾಜು ಯರಗಟ್ಟಿ, ಬಸವರಾಜ ಕಮತಿ, ಬಾಬು, ವಿಜಯ, ಬಾಬು ಮದಿಹಳ್ಳಿ, ಅಮೃತಗೌಡ ಪಾಟೀಲ ಸೇರಿದಂತೆ, 61 ಜೋಡಿ ದಂಪತಿ, ಅವರ ಕುಟುಂಬಸ್ಥರು, ದಾನಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಶೌರ್ಯ ಘಟಕದ ಸದಸ್ಯರು, ನವಜೀವನ ಸಮಿತಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ಯೋಜನಾಧಿಕಾರಿ ವಿನಾಯಕ ಕಾಕಂಬಿ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ವಿಠ್ಠಲ್ ಸಾಲ್ಯಾನ್ ಪ್ರಾಸ್ತಾವಿಸಿದರು. ರಮೇಶ್ ಮತ್ತು ಉಮೇಶ್ ಹಡಗಲಿ ನಿರೂಪಿಸಿದರು. ಸಾಮ್ಯುವಲ್ ಬಳ್ಳಿ ವಂದಿಸಿದರು.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ದುರದುಂಡೇಶ್ವರ ಸಭಾ ಭವನದಲ್ಲಿ ಶುಕ್ರವಾರ ಜರುಗಿದ 2029ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ಧ ಶಿಬಿರಾರ್ಥಿಗಳು ಮತ್ತು ಕುಟುಂಬಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.