ADVERTISEMENT

ನೀರು ಸಮರ್ಪಕ ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 3:15 IST
Last Updated 26 ಏಪ್ರಿಲ್ 2022, 3:15 IST
ಕುಡಿಯುವ ನೀರಿನ ಸಮಸ್ಯೆ ಕುರಿತು ಸವದತ್ತಿನಲ್ಲಿ ಸಾರ್ವಜನಿಕೆ ಸಭೆ ಜರುಗಿತು
ಕುಡಿಯುವ ನೀರಿನ ಸಮಸ್ಯೆ ಕುರಿತು ಸವದತ್ತಿನಲ್ಲಿ ಸಾರ್ವಜನಿಕೆ ಸಭೆ ಜರುಗಿತು   

ಸವದತ್ತಿ: ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಕುರಿತು ಸ್ಟೇಟ್ ಬ್ಯಾಂಕ್ ಸಮೀಪದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಾರ್ವಜನಿಕ ಸಭೆ ನಡೆಯಿತು. ನಿಯಮಿತವಾಗಿ ನೀರು ಪೂರೈಸುವಂತೆ ಬುಧವಾರ ಮನವಿ ಮಾಡಿ ಕಾಲಾವಕಾಶ ನೀಡುವುದು. ಅದಕ್ಕೆ ಪುರಸಭೆ ಸ್ಪಂದಿಸದಿದ್ದರೆ ಪ್ರತಿ ವಾರ್ಡಿನ ಸದಸ್ಯರ ಮನೆ ಮುಂದೆ ಧರಣಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ, ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿನ ಯೋಜನೆ ಪೂರ್ಣವಾಗಲು ಇನ್ನೂ ಸಾಕಷ್ಟು ಸಮಯಬೇಕು. ಸದ್ಯ 9 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ನಾಗರಿಕರು ತಿಳಿಸಿದರು.

ಶಂಕರ ಇಜಂತಕರ, ಮಲ್ಲಿಕಾರ್ಜುನ ಬೀಳಗಿ, ಸೋಮಣ್ಣ ಮಲ್ಲೂರ, ರಾಜು ಮಡ್ಲಿ, ಹೊನಗೌಡ ಪಾಟೀಲ, ಸುರೇಶ ತಿಗಡಿ, ಎನ್.ಜಿ. ರಾಯನಗೌಡ್ರ, ಪುಂಡಲೀಕ ಮರಾಠೆ, ಜಗದೀಶ ವಡಕನ್ನವರ, ಸತ್ಯಪ್ಪ ನಡುವಿನಹಳ್ಳಿ ಇದ್ದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.