
ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಚಿಂಚಲಿಯ ಮಾಯಕ್ಕದೇವಿ ದರ್ಶನ ಪಡೆಯಲು ಮಹಾರಾಷ್ಟ್ರದ ಪಂಢರಪುರದ ಭಕ್ತೆಯೊಬ್ಬರು ಆಕ್ಸಿಜನ್ ಸಲಿಂಡರ್ ಸಹಾಯದೊಂದಿಗೆ ಬಂದು ಅಚ್ಚರಿ ಮೂಡಿಸಿದರು.
ಮಾಯಕ್ಕದೇವಿ ಜಾತ್ರಾ ಮಹೋತ್ಸವ ಬುಧವಾರದಿಂದ ಅದ್ದೂರಿಯಾಗಿ ಆರಂಭಗೊಂಡಿದೆ. ಗಂಭೀರ ಸ್ವರೂಪದ ಕಾಯಿಲೆಗೆ ಒಳಗಾದ ಭಕ್ತೆಯೊಬ್ಬರು, ಅನಾರೋಗ್ಯದ ನಡುವೆಯೂ ಬಂದು ದರ್ಶನ ಪಡೆದರು. ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಈ ದೃಶ್ಯ ಕಂಡ ಇತರ ಭಕ್ತರು ಮಹಿಳೆಯ ಆತ್ಮವಿಶ್ವಾಸ ಹಾಗೂ ದೇವಿಯ ಮೇಲಿನ ಅಚಲ ನಂಬಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ದೇವಿಗೆ ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲೇ ಹೆಚ್ಚು ಭಕ್ತರು ಇರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.