ADVERTISEMENT

ದೇಹಕ್ಕೆ ಬೇಡದ ಆಹಾರ ತಿನ್ನಬೇಡಿ: ಆರೋಗ್ಯ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 13:23 IST
Last Updated 25 ಜೂನ್ 2023, 13:23 IST
ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಎನ್.ಎಸ್.ಎಸ್. ವತಿಯಿಂದ ಹಮ್ಮಿಕೊಂಡ ಆರೋಗ್ಯ ತಪಾಸಣೆ ಶಿಬಿರದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು
ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಎನ್.ಎಸ್.ಎಸ್. ವತಿಯಿಂದ ಹಮ್ಮಿಕೊಂಡ ಆರೋಗ್ಯ ತಪಾಸಣೆ ಶಿಬಿರದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು   

ಹುಕ್ಕೇರಿ: ಆರೋಗ್ಯ ಸದೃಢವಾಗಿರಲು ಹಸಿರು ಪಲ್ಯ, ಮಡಕೆ ಕಾಳು, ಹಾಲು, ಹಣ್ಣು, ಮೊಟ್ಟೆಯಂಥ ಪದಾರ್ಥಗಳನ್ನು ತಿನ್ನಬೇಕು ಎಂದು ಬಸ್ತವಾಡ ಸಮುದಾಯ ಆರೋಗ್ಯ ಅಧಿಕಾರಿ ಅಜಯ ಬಂಡಕರ್ ಹೇಳಿದರು.

ಅವರು ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಎಸ್.ಎಸ್.ಎನ್. ಕಾಲೇಜು ಭಾನುವಾರ ಹಮ್ಮಿಕೊಂಡ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಉಚಿತ ಆರೋಗ್ಯ ತಪಾಸಣೆ ಶಿಬಿರ’ ಉದ್ಘಾಟಿಸಿ ಮಾತನಾಡಿದರು.

‘ನಾಲಿಗೆ ರುಚಿಗಾಗಿ ಅಥವಾ ಹವ್ಯಾಸಕ್ಕಾಗಿ ದೇಹಕ್ಕೆ ಬೇಡವಾದ ಆಹಾರ, ಪಾನೀಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳದಿರಿ’ ಎಂದು ಸಲಹೆ ನೀಡಿದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ತಪಾಸಣೆ: ರಕ್ತದೊತ್ತಡ, ರಕ್ತ ತಪಾಸಣೆ, ಜ್ವರ, ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಕಾಯಿಲೆಗಳ 130ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಿ ಉಚಿತ ಔಷಧ ವಿತರಿಸಲಾಯಿತು.

ಮುಖಂಡ ಆನಂದ ಲಕ್ಕುಂಡಿ, ಪ್ರಾಧ್ಯಾಪಕರಾದ ಆರ್.ಬಿ.ಕೋತ, ಎಂ.ಆರ್.ಗುಗ್ಗರಿ, ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ್, ದೈಹಿಕ ಶಿಕ್ಷಣಾಧಿಕಾರಿ ಬಿ.ಕೆ.ಕೊಟಗಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎಸ್.ಎಸ್.ಬಾನೆ, ಆಶಾ ಕಾರ್ಯಕರ್ತೆಯರಾದ ಜಯಶ್ರೀ ನಾವಿ, ಸುವರ್ಣ ಗಾಂಜಿ, ಲಕ್ಷ್ಮೀಬಾಯಿ ಚಲುವಾದಿ, ಎನ್.ಎಸ್.ಎಸ್. ಹಾಗೂ ಶಿಬಿರ ಯೋಜನಾಧಿಕಾರಿ ಡಾ.ಎಚ್.ಸೋಮಶೇಖರಪ್ಪ, ಸ್ವಯಂ ಸೇವಕಿ ನಮ್ರತಾ ಮುನ್ನೋಳಿ, 50 ಶಿಬಿರಾರ್ಥಿಗಳು, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.