
ಖಾನಾಪುರ: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಡಿ ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ₹500 ಕೋಟಿಯಷ್ಟು ಅನುದಾನ ಹರಿದು ಬಂದಿದೆ ಎಂದು ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ ಹೇಳಿದರು.
ಇದರ ಪ್ರಯೋಜನ ಪಡೆದಿರುವ ತಾಲ್ಲೂಕಿನ ಸಾವಿರಾರು ಕುಟುಂಬಗಳು ಈಗ ನೆಮ್ಮದಿಯ ಜೀವನ ನಡೆಸುತ್ತಿವೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸರ್ಕಾರ ಕಳೆದ 1000 ದಿನಗಳಲ್ಲಿ ಈ ಯೋಜನೆಗಳಿಗಾಗಿ ₹1.16 ಲಕ್ಷ ಕೋಟಿ ವ್ಯಯಿಸಿದ್ದು, ರಾಜ್ಯದ 1.37 ಕೋಟಿ ಕುಟುಂಬಗಳಿಗೆ ಇದರಿಂದ ಪ್ರಯೋಜನ ಸಿಕ್ಕಿದೆ. ನಮ್ಮ ತಾಲ್ಲೂಕಿಗೆ ಈ ಯೋಜನೆಗಳಡಿ ವಿತರಣೆಗೆ ಪ್ರತಿ ತಿಂಗಳು ₹20 ಕೋಟಿ ಅನುದಾನ ಲಭ್ಯವಾಗುತ್ತಿದ್ದು, ಗ್ಯಾರಂಟಿ ಯೋಜನೆಗಳು ಪ್ರಾರಂಭವಾಗಿ 27 ತಿಂಗಳಲ್ಲಿ ₹500 ಕೋಟಿಗೂ ಹೆಚ್ಚು ಹಣ ಲಭ್ಯವಾಗಿದೆ. ಈ ಮೂಲಕ ಬಡವರು, ಸಾಮಾನ್ಯರು, ಶ್ರಮಜೀವಿಗಳು, ಕಾರ್ಮಿಕರು, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಪಕ್ಷ ಹೆಚ್ಚು ಒತ್ತು ನೀಡಿದೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.