ADVERTISEMENT

ಹುಕ್ಕೇರಿ: ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 12:41 IST
Last Updated 19 ಜುಲೈ 2021, 12:41 IST
ಹುಕ್ಕೇರಿ ತಾಲ್ಲುಕಿನ ನೇರಲಿಯಲ್ಲಿ ಭಾನುವಾರ ಸಮಗ್ರ ಕೃಷಿ ಅಭಿಯಾನಕ್ಕೆ ಮತ್ತು ಕೃಷಿ ಇಲಾಖೆ ನಡಿಗೆ ರೈತರ ಮನೆ ಕಡೆಗೆ ಕಾರ್ಯಕ್ರಮಕ್ಕೆ ಆಹಾರ ಸಚಿವ ಉಮೇಶ್ ಕತ್ತಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಹುಕ್ಕೇರಿ ತಾಲ್ಲುಕಿನ ನೇರಲಿಯಲ್ಲಿ ಭಾನುವಾರ ಸಮಗ್ರ ಕೃಷಿ ಅಭಿಯಾನಕ್ಕೆ ಮತ್ತು ಕೃಷಿ ಇಲಾಖೆ ನಡಿಗೆ ರೈತರ ಮನೆ ಕಡೆಗೆ ಕಾರ್ಯಕ್ರಮಕ್ಕೆ ಆಹಾರ ಸಚಿವ ಉಮೇಶ್ ಕತ್ತಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.   

ಹುಕ್ಕೇರಿ: ‘ಕೃಷಿ ಇಲಾಖೆ ನೀಡುವ ಸೌಲಭ್ಯ ಬಳಸಿಕೊಂಡು ರೈತರು ಉತ್ತಮ ಮತ್ತು ಹೆಚ್ಚು ಇಳುವರಿ ಕೊಡುವ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಿ’ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದರು.

ಮುಂಗಾರು ಹಂಗಾಮಿನ ಸಮಗ್ರ ಕೃಷಿ ಅಭಿಯಾನ ಮತ್ತು ಕೃಷಿ ಇಲಾಖೆ ನಡಿಗೆ ರೈತರ ಮನೆ ಕಡೆಗೆ ಕಾರ್ಯಕ್ರಮಕ್ಕೆ ತಾಲ್ಲೂಕಿನ ನೇರಲಿ ಗ್ರಾಮದಲ್ಲಿ ಭಾನುವಾರ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕ ಮಹಾದೇವ್ ಪಟಗುಂದಿ ಪ್ರಾಸ್ತಾವಿಕ ಮಾತನಾಡಿ, ‘ಬೆಳೆ ಸಮೀಕ್ಷೆ, ನನ್ನ ಬೆಳೆ ನನ್ನ ಹಕ್ಕು ಎಂದು ಪರಿಗಣಿಸಿ ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡುವುದು’ ಎಂದರು.

ADVERTISEMENT

ಕೀಟ ಮತ್ತು ರೋಗ ಬಾಧೆಯಿಂದ ಬೆಳೆಗಳನ್ನು ಸಂರಕ್ಷಿಸಿ ಉತ್ತಮ ಇಳುವರಿ ಪಡೆಯಲು ಸಲಹೆ ನೀಡಿದ ಅವರು ಬೆಳೆ ವಿಮೆ ಸೇರಿದಂತೆ ಇಲಾಖೆಯ ವಿವಿಧ ಸೌಲಭ್ಯಗಳ ಕುರಿತು ಪ್ರತಿ ಗ್ರಾಮದಲ್ಲಿ ಅಭಿಯಾನದ ಮೂಲಕ ತಿಳಿಸಲಾಗುವುದು ಎಂದರು.

ತಹಶೀಲ್ದಾರ್ ಡಾ.ದೊಡ್ಡಪ್ಪ ಹೂಗಾರ್, ತಾಲ್ಲೂಕು ಪಂಚಾಯ್ತಿ ಇಒ ಉಮೇಶ್ ಸಿದ್ನಾಳ, ಎಪಿಎಂಸಿ ನಿರ್ದೇಶಕ ಪ್ರಶಾಂತ ಪಾಟೀಲ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ತಾತ್ಯಾಸಾಹೇಬ ದೇಸಾಯಿ, ಪಿಡಬ್ಲೂಡಿ ಎಇಇ ಎಸ್.ಕೆ.ಹುಕ್ಕೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಶೈಲ್ ಹಿರೇಮಠ, ಪವನ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.