ADVERTISEMENT

ಬೆಳಗಾವಿ: ಕಣ್ಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2023, 12:42 IST
Last Updated 14 ನವೆಂಬರ್ 2023, 12:42 IST
<div class="paragraphs"><p>ಎಮ್ಮೆಗಳ ಓಟದ ಸ್ಪರ್ಧೆ</p></div>

ಎಮ್ಮೆಗಳ ಓಟದ ಸ್ಪರ್ಧೆ

   

ಬೆಳಗಾವಿ: ದೀಪಾವಳಿ ಅಂಗವಾಗಿ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಗೌಳಿ ಸಮುದಾಯದವರು ಮಂಗಳವಾರ ಆಯೋಜಿಸಿದ್ದ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು.

ವರ್ಷವಿಡೀ ತಮಗೆ ಹಾಲು ಕೊಟ್ಟು ಪೊರೆಯುವ ಎಮ್ಮೆಗಳನ್ನು ಸೋ‌ಮವಾರ ರಾತ್ರಿಯಿಂದಲೇ ಅಲಂಕರಿಸಿದ ಗೌಳಿಗರು, ಮಂಗಳವಾರ ಬೆಳಿಗ್ಗೆ ಅವುಗಳಿಗೆ ಶ್ರದ್ಧೆಯಿಂದ ಪೂಜೆ ಸಲ್ಲಿಸಿದರು.

ADVERTISEMENT

ಇಲ್ಲಿನ ಗೊಂಧಳಿ ಗಲ್ಲಿ, ಕಂಗ್ರಾಳ ಗಲ್ಲಿ, ಅನಗೋಳ, ಟಿಳಕವಾಡಿಯ ಗೌಳಿ ಗಲ್ಲಿ ಮತ್ತಿತರ ಪ್ರದೇಶಗಳನ್ನು ಎಮ್ಮೆಗಳನ್ನು ಓಡಿಸಲಾಯಿತು.

ಯುವಕರು ಸೈಲೆನ್ಸರ್ ತೆಗೆದು, ಕರ್ಕಶ ಶಬ್ದ ಮಾಡುತ್ತ ವೇಗವಾಗಿ ಬೈಕ್ ಗಳನ್ನು ಓಡಿಸುತ್ತಿದ್ದರೆ, ಎಮ್ಮೆಗಳನ್ನು ಅವರನ್ನು ಹಿಂಬಾಲಿಸುತ್ತಿದ್ದ ದೃಶ್ಯ ರೋಮಾಂಚಕವಾಗಿತ್ತು.

ಎಮ್ಮೆಗಳ ಓಟ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.