ADVERTISEMENT

ಸವದತ್ತಿ | ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಸಾವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 15:56 IST
Last Updated 20 ಜುಲೈ 2025, 15:56 IST
<div class="paragraphs"><p>ಬಸವರಾಜ ನೀಲಪ್ಪ ಕೆಂಗೇರಿ ಹಾಗೂ&nbsp;ಧರೆಪ್ಪ</p></div>

ಬಸವರಾಜ ನೀಲಪ್ಪ ಕೆಂಗೇರಿ ಹಾಗೂ ಧರೆಪ್ಪ

   

ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಳಗಲಿ ಗ್ರಾಮದ ಕಾಲುವೆ ಬಳಿ ಇರುವ ಕೃಷಿ ಹೊಂಡದಲ್ಲಿ ಭಾನುವಾರ ಮುಳುಗಿ ತಂದೆ, ಮಗ ಮೃತಪಟ್ಟಿದ್ದಾರೆ.

ಬಸವರಾಜ ನೀಲಪ್ಪ ಕೆಂಗೇರಿ(40), ಅವರ ಪುತ್ರ ಧರೆಪ್ಪ (14) ಮೃತರು.

ADVERTISEMENT

ಬಸವರಾಜ, ಧರೆಪ್ಪ ಮತ್ತು ಭಾಗಪ್ಪ ಸಣ್ಣಕ್ಕಿ (16) ಹುರಳಿ ಬೆಳೆಗೆ ಔಷಧ ಸಿಂಪಡಿಸುತ್ತಿದ್ದರು. ಆಗ ಬಸವರಾಜ ನೀರು ತರಲು ಹೋಗಿ, ಕೃಷಿ ಹೊಂಡದಲ್ಲಿ ಮುಳುಗಿದರು. ಅವರ ರಕ್ಷಣೆಗೆ ಹೋಗಿದ್ದ ಇನ್ನಿಬ್ಬರು ಮುಳುಗಿದ್ದರು.

ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಮೂವರ ರಕ್ಷಣೆಗೆ ಮುಂದಾದರು. ಆದರೆ, ಅಷ್ಟೊತ್ತಿಗೆ ತಂದೆ–ಮಗ ಮೃತಪಟ್ಟಿದ್ದಾರೆ. ಭಾಗಪ್ಪ ಅವರನ್ನು ರಕ್ಷಿಸಿ, ಚಿಕಿತ್ಸೆಗಾಗಿ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುರಗೋಡ ಠಾಣೆ ಇನ್‌ಸ್ಪೆಕ್ಟರ್‌ ಐ.ಎಂ.ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.