ADVERTISEMENT

ಕೌಜಲಗಿ | ಪ್ರವಾಹ: ತೋಟಪಟ್ಟಿ ಮನೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:20 IST
Last Updated 22 ಆಗಸ್ಟ್ 2025, 2:20 IST
ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಹೊರ ವಲಯದ ಹನುಮಾನ್ ನಗರದ ಪಾರನಟ್ಟಿ ಹನುಮಂತ ದೇವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ
ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಹೊರ ವಲಯದ ಹನುಮಾನ್ ನಗರದ ಪಾರನಟ್ಟಿ ಹನುಮಂತ ದೇವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ   

ಕೌಜಲಗಿ: ಪ್ರವಾಹದಿಂದಾಗಿ ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಗ್ರಾಮದ ಪರಮೇಶ್ವರ ದೇವಸ್ಥಾನ, ಪಾರನಟ್ಟಿ ಹನುಮಂತ ದೇವರ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ನಿತ್ಯ ಪೂಜೆ ಸಲ್ಲಿಸಲು ಪೂಜಾರಿಗಳು ನೀರಿನಲ್ಲಿ ದಾಟಿ ಹೋಗಬೇಕಾದ ಪರಿಸ್ಥಿತಿಯಿದೆ. ಈ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹಲವು ಕಬ್ಬಿನ ಮತ್ತು ಇತರೆ ಬೆಳೆಗಳ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಬೆಳೆ ಹಾನಿಯಿಂದಾಗಿ ರೈತರು ಕಂಗಾಲಾಗಿದ್ದಾರೆ.

ತೋಟಪಟ್ಟಿಯಲ್ಲಿರುವ ರೈತರ ಗುಡಿಸಲು, ಮನೆಗಳು ಜಲಾವೃತಗೊಂಡು ರೈತರು ಕಷ್ಟ ಪಡುತ್ತಿದ್ದಾರೆ. ಘಟಪ್ರಭಾ ನದಿಗೆ ಇನ್ನಷ್ಟು ನೀರು ಹರಿದು ಬಂದರೆ ಅಡಿಬಟ್ಟಿಯ ಸಮೀಪ ದಂಡಿನ ಮಾರ್ಗದ ಸಂಚಾರ ಬಂದಾಗುವ ಸಾಧ್ಯತೆಗಳಿವೆ. ಈಗ ಸದ್ಯ ದಂಡಿನ ಮಾರ್ಗ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.

ADVERTISEMENT
ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಗ್ರಾಮದ ರೈತರ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.