ADVERTISEMENT

ಜೂಜಾಟ: 11 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 15:40 IST
Last Updated 27 ಜೂನ್ 2021, 15:40 IST

ಬೆಳಗಾವಿ: ಪ್ರತ್ಯೇಕ ಪ್ರಕರಣಗಳಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 11 ಮಂದಿ ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕ್ಯಾಂಪ್‌ ಠಾಣೆ ವ್ಯಾಪ್ತಿಯ ಧೋಬಿ ಘಾಟ್ ಬಳಿ ಇಮ್ರಾನ್ ಶೇಖ್ (ಪಂಚಿ), ಇಮ್ರಾನ್‌ ಶೇಖ್, ಫಹೀಮ್ ಬೇಪಾರಿ ಎನ್ನುವವರನ್ನು ಬಂಧಿಸಲಾಗಿದೆ. ಅವರಿಂದ ₹ 4,725 ಮತ್ತು ಮೂರು ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಿಬ್ರಾನ್ ಬೇಪಾರಿ, ಮೆಹಬೂಬ್ ಬೇಪಾರಿ ಹಾಗೂ ಸಮೀರ ಬೆಟಗೇರಿ ಎನ್ನುವವರು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಕ್ಯಾಂಪ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಲ್ಲೂಕಿನ ಮನ್ನೂರಿನಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಚಿನ ಮನ್ನೋಳಕರ, ಕೃಷ್ಣ ಹುಂಚಿಕರ, ಪ್ರಸಾದ ಕದಂ, ಮಹದೇವ ದೋನಕರಿ, ಪರಶುರಾಮ ಮುಂಗಳಿ, ಪ್ರಶಾಂತ ಬಾಳೇಕುಂದ್ರಿ, ಕಪಿಲ ದೋಲೇಕರ ಮತ್ತು ಶಾಮ ದೋನಕರಿ ಬಂಧಿತರು. ಅವರಿಂದ 5 ಮೊಬೈಲ್‌ ಫೋನ್‌ಗಳು ಮತ್ತು ₹ 5,930 ಜಪ್ತಿ ಮಾಡಲಾಗಿದೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಇಬ್ಬರ ಬಂಧನ: ಮಜಗಾಂವ ಕ್ರಾಸ್ ಬಳಿಯ ಹೋಟೆಲ್‌ನಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಆರೋಪದ ಮೇಲೆ ಸಿಇಎನ್‌ ಠಾಣೆ ಪೊಲೀಸರು ಇಬ್ಬರನ್ನು ಭಾನುವಾರ ಬಂಧಿಸಿದ್ದಾರೆ.

‘ಮಜಗಾಂವದ ವಾಲ್ಮೀಕಿ ಗಲ್ಲಿಯ ಪುಂಡಲೀಕ ತಳವಾರ (48) ಹಾಗೂ ಕಿತ್ತೂರಿನ ಗುರುವಾರ ಪೇಟೆಯ ಅರುಣ ದಾನಪ್ಪನವರ (24) ಬಂಧಿತರು. ಅವರಿಂದ 33.75 ಲೀಟರ್‌ ಮದ್ಯ ಮತ್ತು ₹ 3ಸಾವಿರ ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಾಗಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.