ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ನಗರದ ವಿವಿಧೆಡೆ ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಹಳೇ ಸಗಟು ತರಕಾರಿ ಮಾರುಕಟ್ಟೆ ಬಳಿ ಗೋವಾದ ಅದಮ್‌ರೋಹಿಲ್ ಶೇಖ್ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು, ಬೆಳಗಾವಿ ರೈಲ್ವೆ ನಿಲ್ದಾಣದ ಬಳಿ ಗೋಕಾಕ ತಾಲ್ಲೂಕಿನ ಚಿಕ್ಕನಂದಿಯ ಶಂಕರ ದಾಸರ ಎಂಬಾತನನ್ನು ಕ್ಯಾಂಪ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಾಳಿ ಅಂಬ್ರಾಯಿ ರಸ್ತೆಯಲ್ಲಿ ಅದೇ ಪ್ರದೇಶದ ಶ್ರೀಧರ ಕುಡೆ ಎಂಬಾತನನ್ನು ಕ್ಯಾಂಪ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅಶೋಕ ನಗರದಲ್ಲಿ ಹೊಸ ಗಾಂಧಿ ನಗರದ ಮುಬಾರಕ ಶೇಖ್ ಮತ್ತು ಧರ್ಮನಾಥ ಭವನ ಬಳಿ ವೀರಭದ್ರ ನಗರದ ಮಹಮ್ಮದ್‌ಅರಮಾನ್ ಚಾಬೂಕಸವಾರ ಎಂಬಾತನನ್ನು ಮಾಳಮಾರುತಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.