ADVERTISEMENT

ಬೆಳಗಾವಿ: ಘಟಪ್ರಭಾ, ಮಲಪ್ರಭಾ ಜಲಾಶಯಗಳ ಹೊರಹರಿವು ಇಳಿಕೆ

ಕೃಷ್ಣಾ ನದಿಯ ಒಳಹರಿವು ಇಳಿಮುಖ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 6:14 IST
Last Updated 21 ಆಗಸ್ಟ್ 2020, 6:14 IST

ಬೆಳಗಾವಿ: ಜಿಲ್ಲೆಯಂತೆ ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಅಲ್ಲಿಂದ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ಒಳಹರಿವು ತೀವ್ರ ಗತಿಯಲ್ಲಿ ಕಡಿಮೆಯಾಗಿದೆ. 1.73 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ 25 ಸಾವಿರ ಕ್ಯುಸೆಕ್‌ ಕಡಿಮೆಯಾಗಿದೆ.

ಇದೇ ರೀತಿ, ಘಟಪ್ರಭಾ ಹರಿವು ಕೂಡ ಕಡಿಮೆಯಾಗಿದೆ. 19,775 ಕ್ಯುಸೆಕ್‌ ಒಳಹರಿವು ಇದೆ. ಹಿಂದಿನ ದಿನ 31,627 ಕ್ಯುಸೆಕ್‌ ಇತ್ತು. ಹಿಡಕಲ್‌ ಬಳಿಯ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣದಲ್ಲೂ ಗಣನೀಯವಾಗಿ ಇಳಿಕೆಯಾಗಿದೆ. 35 ಸಾವಿರ ಕ್ಯುಸೆಕ್‌ನಷ್ಟಿದ್ದ ಹೊರಹರಿವು, 12 ಸಾವಿರಕ್ಕೆ ಇಳಿದಿದೆ.

ಮಲಪ್ರಭಾ ನದಿಯ ಒಳಹರಿವಿನಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ 5,644 ಕ್ಯುಸೆಕ್‌ ಇದ್ದ ಪ್ರಮಾಣವು 9,720 ಕ್ಯುಸೆಕ್‌ಗೆ ಏರಿಕೆಯಾಗಿದೆ. ಸವದತ್ತಿ ಬಳಿ ನದಿಗೆ ನಿರ್ಮಿಸಲಾಗಿರುವ ನವಿಲುತೀರ್ಥ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. 2,264 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರವಾಹದ ಭೀತಿ ಎದುರಿಸುತ್ತಿದ್ದ ನದಿ ದಂಡೆಯ ಗ್ರಾಮಗಳು ನಿರಾಳವಾಗಿವೆ.

ADVERTISEMENT

ಜಲಾಶಯಗಳ ನೀರಿನ ಮಟ್ಟ

ಜಲಾಶಯ ಗರಿಷ್ಠ ಮಟ್ಟ ಇಂದಿನ ಮಟ್ಟ ಒಳಹರಿವು ಹೊರಹರಿವು
ಮಲಪ್ರಭಾ 2,079.50 2,077.25 9,720 2,264
ಘಟಪ್ರಭಾ 2,175 2,173.33 19,775 12,645

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.