ಕೌಜಲಗಿ: ಮನುಕುಲದ ಉದ್ದಾರಕ್ಕಾಗಿ ಜನಿಸಿ ಬಂದ ಯೇಸು ಕ್ರಿಸ್ತ ಜಗತ್ತಿನ ಕಷ್ಟಗಳೆಲ್ಲವನ್ನು ತನ್ನ ಒಡಲೊಳಗೆ ಇರಿಸಿಕೊಂಡು ಪ್ರೀತಿ-ತ್ಯಾಗದ ಬೆಳಕಾದರೂ ಎಂದು ಕೌಜಲಗಿ ಮೆಥೋಡಿಸ್ಟ ಚರ್ಚನ ಸಭಾ ಪಾಲಕ ಅನಿಲ ಪೂಜನ್ನವರ ಹೇಳಿದರು.
ಕೌಜಲಗಿ ಪಟ್ಟಣದಲ್ಲಿಯ ಮೆಥೋಡಿಸ್ಟ್ ಚರ್ಚ್ ನಲ್ಲಿ ಜರುಗಿದ ಶುಭ ಶುಕ್ರವಾರ ಯೇಸು ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಾರ್ಥನೆ ಅನಂತರ ಕ್ರೈಸ್ತ ದೇವರ ಮಕ್ಕಳನ್ನು ಉದ್ದೇಶಿಸಿ ಸಭಾ ಪಾಲಕರು ಮಾತನಾಡಿದರು.
ಶುಭ ಶುಕ್ರವಾರ ಕ್ರೈಸ್ತ ದೇವನ ಮಕ್ಕಳಿಗೆ ಅತ್ಯಂತ ಪವಿತ್ರವಾದ ದಿನ. ಯೇಸುವಿನ ಸ್ಮರಣಾಚರಣೆ ಅಷ್ಟೇ ಮುಖ್ಯವಲ್ಲ. ಆತ ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಗಳು, ಹಿಂಸೆ-ನೋವುಗಳನ್ನು ಕಳೆದು, ಮನುಕುಲದ ಬದುಕಿಗೆ ಹೊಸ ಬೆಳಕನ್ನು ಮೂಡಿಸಿದ ಶುಭ ಶುಕ್ರವಾರವಾಗಿದೆ ಎಂದರು.
ಚರ್ಚನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಮುದಾಯದ ಮಹಿಳೆಯರು ಯೇಸುವಿನ ಭಕ್ತಿ ಗೀತೆಗಳನ್ನು ಹಾಡಿ ಸ್ಮರಿಸಿದರು.
ಪ್ರಮುಖರಾದ ಪ್ರಶಾಂತ್, ಈಶ್ವರ, ಶ್ಯಾಮರಾಜ, ಹಾಜು, ಸುಮಿತ್ರಾ, ವಿದ್ಯಾಶ್ರೀ, ಜೇಮ್ಸ್ ಉದ್ದಪ್ಪನವರ, ಅಶೋಕ ಉದ್ದಪ್ಪ ನವರ, ಪಕೀರಪ್ಪ ಪೂಜನ್ನವರ, ಶಾಂತಪ್ಪ ಹಿರೇ ಮೇತ್ರಿ, ರಾಮಣ್ಣ ಈಟಿ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.