ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಗುರುವಾರ ಮಳೆ ಸುರಿಯಿತು.
ಬೆಳಗಾವಿಯಲ್ಲಿ ಬೆಳಿಗ್ಗೆಯಿಂದ ಮೋಡ ಕವಿದಿತ್ತು. ಸಂಜೆ ಕೆಲಕಾಲ ಉತ್ತಮ ಮಳೆಯಾಯಿತು.
ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರದಲ್ಲಿ ಗುಡುಗು–ಮಿಂಚು ಸಹಿತವಾಗಿ ಧಾರಾಕಾರ ಮಳೆಯಾದರೆ, ಮೂಡಲಗಿ, ಮುನವಳ್ಳಿಯಲ್ಲಿ ಜೋರಾಗಿ ಮಳೆಯಾಯಿತು.
ಚನ್ನಮ್ಮನ ಕಿತ್ತೂರು, ಬಸಾಪುರ, ನಿಚ್ಚಣಕಿ, ಹೊನ್ನಾಪುರ, ತಿಗಡೊಳ್ಳಿಯಲ್ಲಿ ಉತ್ತಮ ಮಳೆಯಾದರೆ, ರಾಮದುರ್ಗ, ಹುಕ್ಕೇರಿ, ಗೋಕಾಕ, ರಾಯಬಾಗ, ಯಮಕನಮರಡಿಯಲ್ಲಿ ತುಂತುರು ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.