ADVERTISEMENT

ಒಳ್ಳೆಯ ಯೋಜನೆ: ಕುಮಠಳ್ಳಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 15:12 IST
Last Updated 12 ಮಾರ್ಚ್ 2022, 15:12 IST
ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮಕ್ಕೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು
ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮಕ್ಕೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು   

ಅಥಣಿ: ‘ವಿವಿಧ ಸೇವೆಗಳನ್ನ ಪಡೆಯಲು ರೈತರು ಅಲೆದಾಡುವುದು, ಸಮಯ ವ್ಯರ್ಥವಾಗುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರವು ಒಳ್ಳೆಯ ಯೋಜೆನೆಯನ್ನು ರೂಪಿಸಿದೆ. ಕಂದಾಯ ದಾಖಲೆಗಳನ್ನು ಮನೆಗಳಿಗೆ ನೇರವಾಗಿ ತಲುಪಿಸಲಿದೆ’ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಸಮೀಪದ ದರೂರ ಹಾಗೂ ದೊಡವಾಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಗ್ರಾಮ್ ಒನ್ ಕೇಂದ್ರ ಹಾಗೂ ಸತ್ತಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖಂಡರಾದ ರಮೇಶಗೌಡಾ ಪಾಟೀಲ, ಎ.ಎ. ಹುದ್ದಾರ, ಬಿ.ಟಿ. ಪಾಟೀಲ, ನಿಂಗಪ್ಪ ನಂದೇಶ್ವರ,‌ ತಹಶೀಲ್ದಾರ್‌ ದುಂಡಪ್ಪ ಕೋಮಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.