ಮೂಡಲಗಿ: ‘ದೇಶದ ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಕಾರ್ಯವು ಮಹತ್ವದಾಗಿದೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಯಿತಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಗೈಬು ಜೈನೆಖಾನ ಹೇಳಿದರು.
ತಾಲ್ಲೂಕಿನ ಯಾದವಾಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ಜರುಗಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಮೂಡಲಗಿ ತಾಲ್ಲೂಕಾ ಘಟಕದ ದ್ವಿತೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಗ್ರಾಮಗಳ ಸುಧಾರಣೆಯೊಂದಿಗೆ ಗ್ರಾಮೀಣ ಜನರ ಆರೋಗ್ಯ, ಶಿಕ್ಷಣ ಸೇರಿದಂತೆ ಸಮಗ್ರ ಬದಲಾವಣೆ ತರುವ ಕಾರ್ಯಗಳಲ್ಲಿ ಗ್ರಾಮ ಪಂಚಾಯಿತಿಗಳು ಶ್ಲಾಘನೀಯ ಕಾರ್ಯ ಮಾಡುತ್ತಿವೆ’ ಎಂದರು.
ಗ್ರಾಮ ಪಂಚಾಯಿತಿ ಸಂಘದ ಅಧ್ಯಕ್ಷ ಬಸವರಾಜ ಭೂತಾಳಿ ಮಾತನಾಡಿ, ‘ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ನೌಕರರ ಸಂಘವು ಕಾರ್ಯ ಮಾಡಬೇಕು’ ಎಂದರು.
ಸಂಘದ ಮೂಡಲಗಿ ಘಟಕದ ಅಧ್ಯಕ್ಷ ರಮೇಶ ಹೋಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಯಾದವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಲ್ಮೇಶ ಗಾಣಗಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡ್ಡೆಪ್ಪ ಭಜಂತ್ರಿ, ಕಾರ್ಯದರ್ಶಿ ಬಾಳೇಶ ದುಂಡಾನಟ್ಟಿ, ರಾಮುದುರ್ಗ ತಾಲ್ಲೂಕಾ ಘಟಕದ ಅಧ್ಯಕ್ಷ ವೀರಭದ್ರ ಕಂಪ್ಲಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಹುಕ್ಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಯ್ಯ ಮಠಪತಿ, ಕಾರ್ಯದರ್ಶಿ ಯಲ್ಲಪ್ಪ ನಾಯಿಕ, ಬೈಲಹೊಂಗಲ ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸವದತ್ತಿ ಘಟಕದ ಅಧ್ಯಕ್ಷ ಕೇಶವ ದಾಸರ, ಅಥಣಿ ತಾಲ್ಲೂಕು ಘಟಕದ ಅಧ್ಯಕ್ಷ ಹನಮಂತ ಸತ್ತಿ, ರಾಮದುರ್ಗ ಘಟಕದ ಅಧ್ಯಕ್ಷ ಬಾಬು ಗೇನಾನಿ, ಬಸವರಾಜ ನಾ. ಮಿರ್ಜಿ, ಗೂಳಪ್ಪ ಹೊಸೂರ, ಸಿದ್ರಾಯಿ ಬಡಕುರಿ, ಗುಲಾಬ ಪೀರಜಾದೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.