ADVERTISEMENT

ವರ್ಧಮಾನ ಸಾಗರ ಮುನಿ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 14:43 IST
Last Updated 14 ಜೂನ್ 2019, 14:43 IST
ಬೆಳಗಾವಿಗೆ ಶುಕ್ರವಾರ ಬಂದ ವರ್ಧಮಾನ ಸಾಗರ ಹಾಗೂ ಸಂಘದ ಮುನಿಗಳನ್ನು ಸಮಾಜದವರು ಮೆರವಣಿಗೆಯಲ್ಲಿ ಸ್ವಾಗತಿಸಿದರು
ಬೆಳಗಾವಿಗೆ ಶುಕ್ರವಾರ ಬಂದ ವರ್ಧಮಾನ ಸಾಗರ ಹಾಗೂ ಸಂಘದ ಮುನಿಗಳನ್ನು ಸಮಾಜದವರು ಮೆರವಣಿಗೆಯಲ್ಲಿ ಸ್ವಾಗತಿಸಿದರು   

ಬೆಳಗಾವಿ: ಜೈನ ಮುನಿ ವರ್ಧಮಾನ ಸಾಗರ ಮುನಿ ಮತ್ತು ಅವರ ಸಂಘದ ಮುನಿಗಳು ಶುಕ್ರವಾರ ನಗರ ಪ್ರವೇಶಿಸಿದ ಸಂದರ್ಭದಲ್ಲಿ ಸಮಾಜದವರು ಸಂಭ್ರಮದಿಂದ ಸ್ವಾಗತ ಕೋರಿ, ಮೆರವಣಿಗೆಯಲ್ಲಿ ಬರಮಾಡಿಕೊಂಡರು.

ಅನಗೋಳದಿಂದ ಹೊರಟ ಮುನಿಗಳು ಹಿಂದವಾಡಿ ಬಸದಿಗೆ ಆಗಮಿಸಿದರು. ಅಲ್ಲಿನ ಚಂದ್ರಪ್ರಭ ದಿಗಂಬರ ಜೈನ ಬಸದಿ ಸಮಿತಿ ಪದಾಧಿಕಾರಿಗಳು ಪಾದಪೂಜೆ ನೆರವೇರಿಸಿದರು. ಬಳಿಕ ಮೆರವಣಿಗೆ ನಡೆಯಿತು.

ಶಾಸಕ ಅಭಯ ಪಾಟೀಲ, ಮುಖಂಡರಾದ ಸಂಜಯ ಪಾಟೀಲ, ಬಾಳಾಸಾಹೇಬ ಪಾಟೀಲ, ವಿನೋದ ದೊಡ್ಡಣ್ಣವರ, ಮಾಣಿಕಬಾಗ್ ದಿಗಂಬರ ಜೈನ ಬೋರ್ಡಿಂಗ್‌ ಪದಾಧಿಕಾರಿಗಳು ಇದ್ದರು. ಶಹಾಪುರ ಕೋರೆ ಗಲ್ಲಿ, ಹೊಸೂರ, ಪ್ಯಾಟ್ಸನ್ ಕ್ರಾಸ್, ಹಳೆ ಪಿ.ಬಿ. ರಸ್ತೆ ಮೂಲಕ ಮಾಣಿಕಬಾಗ್‌ ದಿಗಂಬರ ಜೈನ ಬೋರ್ಡಿಂಗ್‌ ಬಳಿ ಮೆರವಣಿಗೆ ಮುಕ್ತಾಯಗೊಂಡಿತು. ಚಾತುರ್ಮಾಸ ಸಮಿತಿಯ ಪುಷ್ಪಕ ಹನಮಣ್ಣವರ, ಹೀರಾಚಂದ ಕಲಮನಿ, ಶ್ರೀಪಾಲ ಖೇಮಲಾಪುರೆ, ಅಭಯ ಅವಲಕ್ಕಿ, ಸನತಕುಮಾರ ವಿ.ವಿ., ಕೀರ್ತಿಕುಮಾರ ಕಾಗವಾಡ, ಸನ್ಮತಿ ಕಸ್ತೂರಿ, ಕುಂತಿನಾಥ ಕಲಮನಿ ಭಾಗವಹಿಸಿದ್ದರು.

ADVERTISEMENT

ಮುನಿಗಳು ವಾರದವರೆಗೆ ಇಲ್ಲಿ ವಾಸ್ತವ್ಯ ಹೂಡುವರು. ನಂತರ ಹುಕ್ಕೇರಿ ತಾಲ್ಲೂಕಿನ ಯರನಾಳ ಗ್ರಾಮಕ್ಕೆ ತೆರಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.