ADVERTISEMENT

ಹಂದಿಗುಂದ: ವಿದ್ಯಾರ್ಥಿಗಳ ಓದಿಗಾಗಿ ನಿತ್ಯ 2 ತಾಸು ಟಿವಿ, ಮೊಬೈಲ್‌ ಬಂದ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 1:30 IST
Last Updated 17 ಜನವರಿ 2026, 1:30 IST
<div class="paragraphs"><p>ಸಾಂದರ್ಭಿಕ-ಚಿತ್ರ</p></div>

ಸಾಂದರ್ಭಿಕ-ಚಿತ್ರ

   

- ಎ.ಐ ಚಿತ್ರ

ಹಂದಿಗುಂದ: ರಾಯಬಾಗ ತಾಲ್ಲೂಕಿನ ಕಪ್ಪಲಗುದ್ದಿ ಗ್ರಾಮದ ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳ ಓದಿಗೆ ಉತ್ತೇಜನ ನೀಡಲು ನಿತ್ಯ ಸಂಜೆ 7ರಿಂದ ರಾತ್ರಿ 9ರವರೆಗೆ ಟಿ.ವಿ ಮತ್ತು ಮೊಬೈಲ್‌ಫೋನ್‌ ಬಳಸದಂತೆ ಗ್ರಾಮ ಪಂಚಾಯಿತಿಯಲ್ಲಿ ಠರಾವ್ ಪಾಸ್‌ ಮಾಡಲಾಗಿದೆ. ನಾಲ್ಕು ದಿನಗಳಿಂದ ಇದನ್ನು ಪಾಲಿಸಲಾಗುತ್ತಿದೆ.

ADVERTISEMENT

‘ಗ್ರಾಮಸ್ಥರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮಹಾದೇವ ನಾಯಕ ತಿಳಿಸಿದ್ದಾರೆ. ಪಿಡಿಒ ಬಿ.ಎಸ್. ನಾಗನೂರ, ಎಸ್‌ಡಿಎಂಸಿ ಅಧ್ಯಕ್ಷ ಗುರು ಅಂಗಡಿ ಮತ್ತು ಮುಖ್ಯ ಶಿಕ್ಷಕ ಪಿ.ಎಂ. ದಿವಾಕರ ಸಮ್ಮತಿಸಿದ್ದಾರೆ.

‘ಕಪ್ಪಲಗುದ್ದಿಯಲ್ಲಿ ಸರ್ಕಾರಿ ಮಾದರಿ ಶಾಲೆ ಮತ್ತು ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಇದೆ. ಪಿಯು ಮತ್ತು ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಪಟ್ಟಣಗಳಿಗೆ ಹೋಗುತ್ತಾರೆ. ಮನೆಯಲ್ಲೇ ಓದಲಿ ಎಂಬುದು ಇದರ ಉದ್ದೇಶ’ ಎಂದು ಗ್ರಾಮಸ್ಥರು ತಿಳಿಸಿದರು.

‘ಬೆಳಗಾವಿ ತಾಲ್ಲೂಕಿನ ಹಲಗಾದಲ್ಲಿ ತಿಂಗಳ ಹಿಂದೆ ಇಂಥ ಯತ್ನ ನಡೆದಿತ್ತು. ಅವರಿಂದ ಕಪ್ಪಲಗುದ್ದಿ ಗ್ರಾಮಸ್ಥರು ಪ್ರೇರಣೆ ಪಡೆದಿದ್ದಾರೆ. ಖುದ್ದು ಪರಿಶೀಲಿಸಿದ್ದೇನೆ. ಇದು ಒಳ್ಳೆಯ ಪ್ರಯತ್ನ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಶಿಂಧೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.