ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 12:04 IST
Last Updated 20 ಅಕ್ಟೋಬರ್ 2019, 12:04 IST
ಸವದತ್ತಿ ತಾಲ್ಲೂಕಿನ ತುಪರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಸೇತುವೆ ಪಕ್ಕದ ಸವದತ್ತಿ–ಧಾರವಾಡ ಸಂಪರ್ಕ ತಾತ್ಕಾಲಿಕ ಸೇತುವೆ ಮುಳುಗಿದೆ. ಮುಖ್ಯಸೇತುವೆ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಕುಸಿದಿತ್ತು. ಅದು ದುರಸ್ತಿಯಾಗಿಲ್ಲ
ಸವದತ್ತಿ ತಾಲ್ಲೂಕಿನ ತುಪರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಸೇತುವೆ ಪಕ್ಕದ ಸವದತ್ತಿ–ಧಾರವಾಡ ಸಂಪರ್ಕ ತಾತ್ಕಾಲಿಕ ಸೇತುವೆ ಮುಳುಗಿದೆ. ಮುಖ್ಯಸೇತುವೆ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಕುಸಿದಿತ್ತು. ಅದು ದುರಸ್ತಿಯಾಗಿಲ್ಲ   

ಬೆಳಗಾವಿ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಿಗ್ಗೆವರೆಗೂ ಜೋರು ಮಳೆಯಾಯಿತು. ನಗರವೂ ಸೇರದಿಂತೆ ಅಲ್ಲಲ್ಲಿ ಭಾನುವಾರವೂ ಆಗಾಗ ಸಾಧಾರಣೆ ಮಳೆ ಬಿದ್ದಿತು.

ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲ್ಲೂಕು ಇನಾಮಹೊಂಗಲ ಬಳಿಯ ತುಪರಿ ಹಳ್ಳದ ಸೇತುವೆ ಮತ್ತೆ ಮುಳಗಡೆಯಾಗಿದೆ. ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದ್ದು, ಸವದತ್ತಿ-ಧಾರವಾಡ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಮುಖ್ಯ ಸೇತುವೆ ಕುಸಿದಿತ್ತು. ಅದನ್ನು ಈವರೆಗೂ ದುರಸ್ತಿಪಡಿಸಿಲ್ಲ. ಅದರ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಇದು, ವಾರದ ಅವಧಿಯಲ್ಲಿ 2ನೇ ಬಾರಿ ಮುಳುಗಡೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.