ADVERTISEMENT

ಹುಕ್ಕೇರಿ: ಸಂಭ್ರಮದ ಹೆಡಿಗೆ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:09 IST
Last Updated 20 ಜುಲೈ 2025, 3:09 IST
ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಶುಕ್ರವಾರ ಹೆಡಿಗೆ ಜಾತ್ರೆ ಅಂಗವಾಗಿ ಮಹಾಲಕ್ಷ್ಮೀ ಹಾಗೂ ರಾಮಲಿಂಗೇಶ್ವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ಜರುಗಿತು
ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಶುಕ್ರವಾರ ಹೆಡಿಗೆ ಜಾತ್ರೆ ಅಂಗವಾಗಿ ಮಹಾಲಕ್ಷ್ಮೀ ಹಾಗೂ ರಾಮಲಿಂಗೇಶ್ವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ಜರುಗಿತು   

ಹುಕ್ಕೇರಿ: ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ವರುಣನ ಕೃಪೆಗಾಗಿ ವಾರ ಪಾಲಿಸುವ ಕಾರ್ಯಕ್ರಮ (ಹೆಡಿಗೆ ಜಾತ್ರೆ) ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳಿಂದ ಸಂಪನ್ನಗೊಂಡಿತು.

ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಐದು ವಾರಗಳ ಕಾಲ ವಾರ ಪಾಲಿಸುವ ಪದ್ಧತಿಯನ್ನು ಗ್ರಾಮಸ್ಥರು ಕಳೆದ 39 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ‘ವಾರ ಪಾಲಿಸುವ’ ದಿನದಂದು ಗ್ರಾಮದಲ್ಲಿ ಎತ್ತುಗಳಿಗೆ ನೊಗ ಹಾಕುವುದಿಲ್ಲ. ಕೃಷಿ ಚಟುವಟಿಕೆ ಹಾಗೂ ಕರಿದ ಪದಾರ್ಥಗಳಿಂದ ದೂರ ಇರುತ್ತಾರೆ.

ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ಶುಕ್ರವಾರ ಜಲಾಭಿಷೇಕ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರುವಾರ ರಾತ್ರಿಯಿಡೀ ಭಜನೆ, ಕೀರ್ತನೆ ಜರುಗಿತು. ಮಹಿಳೆಯರು ಜಲಕುಂಭ ಹೊತ್ತರು. ಆರತಿ ಬೆಳಗಿದರು. ಅಂಬಲಿ ಕೊಡದ ಮೂಲಕ ಪ್ರಸಾದ ಅರ್ಪಿಸಿದರು.

ADVERTISEMENT
ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಶುಕ್ರವಾರ ಹೆಡಿಗೆ ಜಾತ್ರೆ ಅಂಗವಾಗಿ ತಯಾರಿಸಿದ್ದ ಬಿಸಿ ಹುಗ್ಗಿಯನ್ನು ಭಕ್ತರು ಕೈಯಿಂದ ಬಕೆಟ್‌ಗೆ ಹಾಕಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.