
ಬೆಳಗಾವಿ: ಅಖಂಡ ಹಿಂದೂ ಸಮ್ಮೇಳನದ ಅಂಗವಾಗಿ ಬೆಳಗಾವಿ ಬಳಿಯ ಮಚ್ಚೆ ಗ್ರಾಮದಲ್ಲಿ ಭಾನುವಾರ ನಡೆದ ಶೋಭಾ ಯಾತ್ರೆ ವೇಳೆ ಅನ್ಯಕೋಮಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಮಹಾರಾಷ್ಟ್ರದ ಹಿಂದೂ ನಾಯಕಿ ಹರ್ಷಿತಾ ಠಾಕೂರ ಸೇರಿ ಏಳು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮಚ್ಚೆ ಗ್ರಾಮದಲ್ಲಿ ಭಾನುವಾರ ನಡೆದ ಹಿಂದೂ ಸಮ್ಮೇಳನಕ್ಕೂ ಮುನ್ನ ಶೋಭಾ ಯಾತ್ರೆ ಮಾಡಲಾಯಿತು. ವಾಹನದ ಮೇಲೆ ನಿಂತ ಹರ್ಷಿತಾ ಅವರು ಅನ್ಸಾರಿ ದರ್ಗಾದ ಬಳಿ ಬಂದಾಗ ವಾಹನ ನಿಲ್ಲಿಸಿ ದರ್ಗಾದ ಕಡೆಗೆ ಬಾಣ ಬಿಟ್ಟಂತೆ ಕೈ ಮಾಡಿ ತೋರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅಲ್ಲದೇ, ಸಮಾವೇಶದಲ್ಲಿಯೂ ಧಾರ್ಮಿಕ ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ ಎಂದು ಅಬ್ದುಲ್ ಖಾದರ್ ಮುಜಾವರ ಎನ್ನುವವರು ದೂರು ದಾಖಲಿಸಿದ್ದಾರೆ.
ಸಮಾವೇಶದ ಆಯೋಜಕರಾದ ಬೆಳಗಾವಿಯ ಸುಪ್ರೀತ್ ಸಿಂಪಿ, ಶ್ರೀಕಾಂತ ಕಾಂಬಳೆ, ಬೆಟ್ಟಪ್ಪ ತಾರಿಹಾಳ, ಶಿವಾಜಿ ಶಹಾಪೂರಕರ, ಗಂಗಾರಾಮ ತಾರಿಹಾಳ, ಕಲ್ಲಪ್ಪ ಅವರ ಮೇಲೂ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.