ಬೈಲಹೊಂಗಲ: ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಾವೆಲ್ಲರೂ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ನಿಲ್ಲೋಣ ಎಂಬ ಧೈಯದೊಂದಿಗೆ ಬಿಜೆಪಿ ಮಂಡಲ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಪಕ್ಷಾತೀತವಾಗಿ ಸೇರಿದ ರಾಜಕೀಯ ಮುಖಂಡರು, ವಿವಿಧ ಪಕ್ಷಗಳ ಪದಾಧಿಕಾರಿಗಳು, ಮಾಜಿ ಸೈನಿಕರು, ರೈತರು, ವಕೀಲರು, ವಿದ್ಯಾರ್ಥಿಗಳು ಶಾಖಾ ಮೂರುಸಾವಿರಮಠದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೃಹತ್ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಭಾರತೀಯ ಸೇನೆಗೆ, ಸೈನಿಕರಿಗೆ ಜಯಘೋಷಣೆ ಮೊಳಗಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೃಢ ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತ್ರಿವರ್ಣ ಧ್ವಜ ಹಿಡಿದು ಉತ್ಸಾಹದಿಂದ ಭಾರತ ಮಾತೆಗೆ ಜಯಘೋಷ ಮೊಳಗಿಸಿದರು.
ಮಾಜಿ ಶಾಸಕರಾದ ಡಾ ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ‘ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ’ ಎಂದರು.
ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಬಿಜೆಪಿ ಮಾಧ್ಯಮ ವಕ್ತಾರ ಸಚಿನ ಖಡಿ, ಸಂತೋಷ ಹಡಪದ, ಗುರುಪಾದ ಕಳ್ಳಿ, ಮುಖಂಡ ವಿಜಯ ಮೆಟಗುಡ್ಡ, ಗುರು ಮೆಟಗುಡ್ಡ ಶ್ರೀಶೈಲ ಯಡಳ್ಳಿ, ಮಡಿವಾಳಪ್ಪ ಹೋಟಿ, ಪಾಂಡಪ್ಪ ಕೋಟಗಿ, ವಿಜಯ ಪತ್ತಾರ, ದುಂಡೇಶ ಗರಗದ, ಬಿ ಬಿ ಬೋಗೂರ, ಮುದುಕಪ್ಪ ತೋಟಗಿ, ರಿತೇಶ ಪಾಟೀಲ, ಶಿವಾನಂದ ಬಡ್ಡಿಮನಿ, ಸೋಮನಾಥ ಸೊಪ್ಪಿಮಠ, ಉದಯ ಬೂದಿಹಾಳ, ರಾಜು ಕುಡಸೋಮನ್ನವರ ದಯಾನಂದ ಪರಾಳಶೆಟ್ಟರ, ಸಂಗಮೇಶ ಸವದತ್ತಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.